ಹುಷಾರ್ ಗುರು..100 ರೂ. ನೋಟು ನಕಲಿ,ನಕಲಿ …!

ಈ ಸುದ್ದಿಯನ್ನು ಶೇರ್ ಮಾಡಿ

100-Rs-Note

ಬೆಂಗಳೂರು, ಜೂ.4- ಪೊಲೀಸರು ಚಾಪೆ ಕೆಳಗೆ ತೂರಿದರೆ ಖದೀಮರು ರಂಗೋಲಿ ಕೆಳಗೆ ನುಸುಳುತ್ತಾರೆ…!   ಎನ್ನುವ ಹಾಗೆ 500, 1000 ರೂ. ಮುಖಬೆಲೆಯ ನೋಟುಗಳು ಅಮಾನೀಕರಣಗೊಂಡ ನಂತರ  ಖದೀಮರು 100 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆಗೆ ಮುಂದಾಗಿದ್ದಾರೆ. ನೈಜ 100 ರೂ. ನೋಟಿನ ಮುಖಕ್ಕೆ ಹೊಡೆದಂತಿರುವ ನಕಲಿ ನೋಟುಗಳು ಗ್ರಾಮೀಣ ಪ್ರದೇಶದಲ್ಲಿ ಎಗ್ಗಿಲ್ಲದೆ ಚಲಾವಣೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಅಸಲಿ ನೋಟಿಗಿಂತ ಸುತ್ತಳತೆಯಲ್ಲಿ ತುಸು ವ್ಯತ್ಯಾಸವಿದ್ದು ಕೆಲವು ಸಣ್ಣ ಪುಟ್ಟ ಲೋಪವಿರುವ 100 ರೂ. ನಕಲಿ ನೋಟನ್ನು ಪತ್ತೆ ಹಚ್ಚುವುದೇ ದುಸ್ತರ.


ವ್ಯಾಪಾರಿಗಳಿಗೆ 100 ರೂ. ನೋಟು ನೀಡಿದಾಗ ಅದು ಅಸಲಿಯೋ? ನಕಲಿಯೋ? ಎಂಬುದನ್ನು ಪರಿಶೀಲಿಸಲು ಮುಂದಾಗದಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ 100 ರೂ. ಮುಖ ಬೆಲೆಯ ನಕಲಿ ನೋಟು ಅತಿ ಹೆಚ್ಚು ಚಲಾವಣೆಯಾಗುತ್ತಿದೆ. ನಾಗರಿಕರ ಹಿತದೃಷ್ಟಿಯಿಂದ ನಕಲಿ 100 ರೂ. ನೋಟನ್ನು ಪತ್ತೆ ಹಚ್ಚುವುದು ಹೇಗೆ ಎಂಬುದನ್ನು ಈ ಸಂಜೆ ನಿಮಗೆ ಮಾಹಿತಿ ನೀಡುತ್ತಿದೆ.

* ನೋಟು ಮುದ್ರಣಕ್ಕೆ ಕಳಪೆ ಕಾಗದ.
* ಸೆಕ್ಯೂರಿಟಿ ಪದರ (ಫೈಲ್)ದಲ್ಲಿ ಆರ್‍ಬಿಐ ಅಕ್ಷರ ಮುದ್ರಣವಾಗಿರುವುದಿಲ್ಲ.
* ನೋಟಿನ ಎಡಭಾಗದ ಬಿಳಿ ಪ್ರದೇಶದಲ್ಲಿ ಮಹಾತ್ಮಗಾಂಧೀಜಿ ಪ್ರತಿಫಲನ ಕಾಣುವುದಿಲ್ಲ.
* ಮಾಮೂಲಿ ನೋಟಿಗಿಂತ ಸುತ್ತಳತೆ ತುಸು ಕಡಿಮೆ.
*ಗಾಂಧಿ ಭಾವಚಿತ್ರ ಹಿಂಭಾಗದ ಹಸಿರು ವಲಯದ ಹೂವಿನ ಆಕೃತಿ ಅಸ್ಪಷ್ಟ.

* ನೋಟಿನ ಸಂಖ್ಯೆ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ವಿಸ್ತರಣೆ.
ಇವಿಷ್ಟು ಲೋಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅದು ನಕಲಿ ನೋಟು ಎಂಬುದು ಪತ್ತೆಯಾಗುತ್ತದೆ.
ಹೀಗಾಗಿ ಗ್ರಾಹಕರು ಇನ್ಮುಂದೆ 100 ರೂ. ನೋಟು ಪಡೆಯುವ ಮುನ್ನ ಈ ಮೇಲ್ಕಂಡ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಸೂಕ್ತ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin