ಹುಷಾರ್.. ಚಳಿಗಾಲದಲ್ಲಿ ಅಸ್ತಮಾ ನಿರ್ಲಕ್ಷಿಸಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

Asthama-01

ಇಂದು ನಗರವಾಸಿಗಳಿಗೆ ಸಾಮಾನ್ಯ ಸಮಸ್ಯೆ ಯಾಗಿ ಕಾಡುತ್ತಿರುವ ಅಸ್ತಮಾ ಕಾಯಿಲೆ ಅನುವಂಶಿಕವಾಗಿ ಹಾಗೂ ಅಲರ್ಜಿ ಯಿಂದ ಬರುತ್ತದೆ. ಸಾಮಾನ್ಯವಾಗಿ ಇತ್ತೀಚೆಗೆ ನಗರಗಳಲ್ಲಿ ಹೆಚ್ಚಿದ ವಾಯುಮಾಲಿನ್ಯದಿಂದಾಗಿ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅಸ್ತಮಾ ಉಂಟು ಮಾಡುವಂತಹ ಅಲರ್ಜಿ ವಸ್ತುಗಳ ಸಂಖ್ಯೆ ವಾತಾವರಣದಲ್ಲಿ ಈಗ ಹೆಚ್ಚುತ್ತಿದೆ. ಅಸ್ತಮಾ ಕಾಯಿಲೆಯಿಂದ ಬಳಲುವವರ ಶ್ವಾಸ ನಾಳಗಳ ಒಳಪದರ ಉಬ್ಬಿಕೊಂಡು ನಾಳದ ರಂದ್ರ ಸಂಕುಚಿತ ಗೊಳ್ಳುತ್ತದೆ. ಆದುದರಿಂದ ಶ್ವಾಸ ಕೋಶದಿಂದ ಉಸಿರು ಹೊರ ಹೋಗುವಾಗ ತಡೆ ಉಂಟಾಗಿ ದಮ್ಮು ಕಟ್ಟಿದ ಅನುಭವ ಉಂಟಾ ಗುತ್ತದೆ. ಕ್ರಮೇಣ ಶ್ವಾಸನಾಳಗಳು ಮುಚ್ಚಿದಂತಾಗಿ ದೇಹದಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಸಾವು ಸಂಭವಿಸಬಹುದು.
ಶ್ವಾಸನಾಳಗಳ ಗೊಡೆಗಳ ಮೇಲೆ ಶೇಖರಣೆಯಾಗುವ ಕಫ ಕ್ರಮೇಣ ಉಸಿರಾಟಕ್ಕೆ ಅತೀವವಾದ ತೊಂದರೆಯನ್ನುಂಟು ಮಾಡುತ್ತದೆ. ಹೆಚ್ಚಿನ ಕೆಮ್ಮು, ಉಸಿರಾಡುವಾಗ ಶಬ್ಧ ಬರುವುದು ಮೊದಲ ಹಂತದ ಅಸ್ತಮಾ ಲಕ್ಷಣಗಳನ್ನು ತೊರಿಸುತ್ತದೆ.

ಅದರಲ್ಲೂ ಚಲಿಗಾಲ ಅಸ್ಥಮಾ ರೋಗಿಗಳಿಗೆ ನರಕ ಎಂದೇ ಹೇಳ ಲಾಗುತ್ತದೆ. ಅಸ್ತಮಾ ರೋಗಿಗಳು ಚಳಿಗಾಲ ದಲ್ಲಿ ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯ., ಇಲ್ಲದಿದ್ದರೆ ಅಸ್ತಮಾ ಅಪಾಯ ತಂಡೊಡ್ಡುವುದು.  ಇತ್ತೀಚೆಗೆ ಅಸ್ತಮಾ ಕಾಯಿಲೆಗೆ ಒಳ್ಳೆಯ ಔಷಧಿಗಳು ಬಂದಿವೆ. ಶ್ವಾಸನಾಳಗಳನ್ನು ವಿಕಸಿಸುವಂತಹ ಔಷಧಿಗಳಿಗೆ ಇಂಗ್ಲಿಷ ನಲ್ಲಿ ಬ್ರೊಂಕೋ ಡೈಲೆಟರ್ (Broncho dilator) ಎನ್ನುತ್ತಾರೆ..ಇದು ಗುಳಿಗೆ, ಸೇದುವ ಮಾತ್ರೆ, ಮತ್ತು ಸೇದುವ ಗಾಳಿ ರೂಪದಲ್ಲಿ ಬರುತ್ತವೆ. ಇದರಲ್ಲಿ ಸೇದುವ ಮಾರ್ಗ ಉತ್ತಮ. ಏಕೆಂದರೆ ಈ ವಿಧಾನದಲ್ಲಿ ಔಷಧ ನೇರ ಶ್ವಾಸಕೋಶಕ್ಕೆ ಹೋಗಿ ಸಂಕುಚನ ಗೊಂಡ ನಾಳವನ್ನು ಕೂಡಲೇ ವಿಕಸನ ಗೊಳಿಸುವುದು.

ರೋಗಿಗೆ ತೀವ್ರ ಅಸ್ತಮಾ ಇದ್ದಾರೆ ನೆಬುಲೈಸರ್ ಎಂಬ ಯಂತ್ರದ ಮುಖಾಂತರ ಔಷಧಿಯನ್ನು ದ್ರಾವಣದ ಹವೆ ರೂಪದಲ್ಲಿ ಕೊಡುವ ಪದ್ಧತಿ ಇದೆ. ಶ್ವಾಸನಾಳದ ವಿಕಸನ ಔಷಧಿಗಳೊಂದಿಗೆ ಅಲರ್ಜಿ ತೆಗೆಯಲು ಸ್ಟೀರಾಯ್ಡಗಳನ್ನೂ ಕೊಡುತ್ತಾರೆ. ಇವೂ ಮೇಲೆ ಹೇಳಿದ ವಿವಿಧ ರೂಪಗಳಲ್ಲಿ ಸಿಗುತ್ತವೆ. ಕೆಲವರು ಸ್ಟೀರಾಯ್ಡ ಎಂದರೆ ಬೆಚ್ಚಿ ಬೀಳುತ್ತಾರೆ. ಆದರೆ ಯಾವುದೇ ಔಷಧಿ ಹಿತ ಮಿತದಲ್ಲಿ ಇದ್ದರೆ ತೊಂದರೆ ಇಲ್ಲ. ಆಸ್ತಮಾದ ತೊಂದರೆಗಿಂತ ಚಿಕ್ಕ ಪುಟ್ಟ ಅಡ್ಡ ಪರಿಣಾಮ ಲೇಸು ಎನ್ನುತ್ತಾರೆ ಕೆಲವು ವೈದ್ಯರು. ಒಟ್ಟಿನಲ್ಲಿ ಚಳಿಗಾಲದಲ್ಲಿ ಅಸ್ತಮಾದಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸುವುದು ಒಳಿತು.

► Follow us on –  Facebook / Twitter  / Google+

Facebook Comments

Sri Raghav

Admin