ಹುಷಾರ್, ಚಾಮುಂಡಿ ಬೆಟ್ಟದಲ್ಲಿ ಬಲಿಗಾಗಿ ಕಾಯುತ್ತಿವೆ ಕಳಪೆ ಕಾಮಗಾರಿಯ ತಡೆಗೋಡೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Chamundi-Hills--01

ಮೈಸೂರು, ಡಿ.16- ನಗರದಲ್ಲಿ ನೆಲೆಸಿರುವ ಚಾಮುಂಡಿ ದೇವಿ ದರ್ಶನಕ್ಕಾಗಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಎಚ್ಚರಿಕೆಯಿಂದ ವಾಹನ ಚಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಬೆಟ್ಟಕ್ಕೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಆದರೆ, ರಕ್ಷಣಾತ್ಮಕ ದೃಷ್ಟಿಯಿಂದ ಭದ್ರವಾಗಿ ನಿರ್ಮಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ತಡೆಗೋಡೆಯನ್ನು ಕೇವಲ ಕಲ್ಲು, ಮಣ್ಣಿನಿಂದ ನಿರ್ಮಿಸಿ ಕಳಪೆ ಕಾಮಗಾರಿ ಮಾಡಲಾಗಿದೆ. ಒಂದು ವೇಳೆ ತಡೆಗೋಡೆಗೆ ವಾಹನವೇನಾದರು ಡಿಕ್ಕಿ ಹೊಡೆದರೆ ಕೆಳಕ್ಕೆ ಬೀಳುವ ಅಪಾಯವಿದೆ.

ಬೆಟ್ಟಕ್ಕೆ ಹೋಗುವ ಹಾಗೂ ಬರುವಾಗ ತಿರುವುಗಳಲ್ಲಿ ತಡೆಗೋಡೆಗೆ ವಾಹನ ತಗುಲಿದರೆ ಅಪಘಾತಗಳಾಗುವುದು ಗ್ಯಾರಂಟಿ. ತಡೆಗೋಡೆಯನ್ನು ಕಳಪೆ ಗುಣಮಟ್ಟದಿಂದ ನಿರ್ಮಿಸಿರುವುದು ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ. ಬೈಕ್ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕಿದೆ. ಒಟ್ಟಾರೆ ಬೆಟ್ಟಕ್ಕೆ ಬರುವವರು, ಹೋಗುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಸರಿ.  ಈ ಕೂಡಲೇ ಕಳಪೆಕಾಮಗಾರಿಯಿಂದ ನಿರ್ಮಿಸಿರುವ ತಡೆಗೋಡೆಗಳನ್ನು ತೆರವುಗೊಳಿಸಿ ಸಂಬಂಧಪಟ್ಟವರು ರಕ್ಷಣಾತ್ಮಕ ದೃಷ್ಟಿ ಇಟ್ಟುಕೊಂಡು ಗುಣಮಟ್ಟದ ತಡೆಗೋಡೆ ನಿರ್ಮಿಸಬೇಕೆಂದು ಭಕ್ತಾದಿಗಳು ಮನವಿ ಮಾಡಿದ್ದಾರೆ.

Facebook Comments

Sri Raghav

Admin