ಹೃತಿಕ್ ಗೆ ಈಜಿಪ್ಟ್ 500 ಕೆಜಿ ಮಹಿಳೆ ಜೊತೆ ಡ್ಯಾನ್ಸ್ ಮಾಡುವಾಸೆಯಂತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Hrutik

ತನ್ನ ಭಾರೀ ಗಾತ್ರದ ಶರೀರ ಇಳಿಸಿಕೊಳ್ಳಲು ಮುಂಬೈನಲ್ಲಿ ಚಿಕಿತ್ಸೆಗೆ ಒಳಗಾಗಿರುವ 500 ಕೆಜಿ ತೂಕದ ಈಜಿಪ್ಟ್ ಮಹಿಳೆ ಎಮಾನ್ ಅಹಮದ್ ಅಬ್ಡೆಲಟಿಗೆ ಒಂದು ದೊಡ್ಡ ಬಯಕೆ ಇದೆಯಂತೆ. ತನ್ನ ತೂಕ ಕಡಿಮೆಯಾದ ಮೇಲೆ ಬಾಲಿವುಡ್ ಸೂಪರ್‍ಸ್ಟಾರ್ ಹೃತಿಕ್ ರೋಷನ್ ಜೊತೆ ಡ್ಯಾನ್ಸ್ ಮಾಡಬೇಕೆಂಬದು ಆಕೆ ಇಚ್ಚೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಕ್ಸ್ ಪ್ಯಾಕ್  ನಟ ಹೃತಿಕ್ ಕೂಡ ತನಗೂ ಆಕೆಯೊಂದಿಗೆ ಹೆಜ್ಜೆ ಹಾಕಿ ಅನುಭವ ಪಡೆಯಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.  ವಿದೇಶದಲ್ಲಿರುವ ಹೃತಿಕ್ ಎಮಾನ್ ಆಸೆಯನ್ನು ಮಾಧ್ಯಮಗಳ ಮೂಲಕ ತಿಳಿದು ಆಕೆಯ ಆಸೆಯನ್ನು ಪೂರೈಸಲು ಓಕೆ ಎಂದಿದ್ದಾನೆ. ನಾನು ಭಾರತಕ್ಕೆ ಬಂದ ನಂತರ ಎಮಾನ್‍ಳನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾನೆ.

ಬ್ಯಾರಿಯಾಟ್ರಿಕ್ ಸರ್ಜರಿಗೆ ಒಳಗಾಗಿರುವ ಎಮಾನ್ ಚಿಕಿತ್ಸೆಗಾಗಿ ಹೃತಿಕ್ ತಾಯಿ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ನಟನ ಸಹೋದರಿ ಸುನೈನಾ ಆಸ್ಪತ್ರೆಗೆ ಭೇಟಿ ನೀಡಿ 38 ವರ್ಷದ ಈಜಿಪ್ಟ್ ಮಹಿಳೆಗೆ ಶುಭ ಕೋರಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin