ಹೃದಯಾಘಾತದಿಂದ ಕರ್ತವ್ಯ ನಿರತ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Heart-attack

ತುಮಕೂರು,ಆ.8-ಹೃದಯಾಘಾತದಿಂದ ಹೆಡ್‍ಕಾನ್‍ಸ್ಟೇಬಲ್ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.  ತಿಲಕ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾಕರ್ ಮೃತಪಟ್ಟ ಹೆಡ್‍ಕಾನ್‍ಸ್ಟೇಬಲ್.  ಇವರು ಬಾರ್‍ಲೈನ್ ರಸ್ತೆಯಲ್ಲಿರುವ ವಸತಿಗೃಹದಲ್ಲಿ ವಾಸವಿದ್ದು, ಇಂದು ಬೆಳಗ್ಗೆ ಠಾಣೆಗೆ ಹೊರಟಿದ್ದರು.   ಈ ವೇಳೆ ಮನೆಯಲ್ಲೇ ಎಡವಿಬಿದ್ದಾರೆ. ನಂತರ ಅದೇ ನೋವಿನಲ್ಲೇ ಠಾಣೆಗೆ ಹೋಗಿದ್ದು , ಎದೆಯ  ಭಾಗದಲ್ಲಿ ನೋವು ಕಾಣಿಸಿಕೊಂಡ ನಂತರ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.   1993ರಲ್ಲಿ ಸೇವೆಗೆ  ಸೇರಿದ ಇವರು ತಿಪಟೂರು ತಿಲಕ್‍ಪಾರ್ಕ್ ಸೇರಿದಂತೆ  ಮತ್ತಿತರ ಕಡೆ ಕೆಲಸ ಮಾಡಿ ಮುಖ್ಯಪೇದೆಯಾಗಿ ಭರ್ತಿಪಡೆದು ತಿಲಕ್‍ಪಾರ್ಕ್ ಠಾಣೆಗೆ ವರ್ಗಾವಣೆಯಾಗಿದ್ದರು.
ಮೃತರು ಪತ್ನಿ ತುಳಸಿ, ಮಕ್ಕಳಾದ ರಕ್ಷಿತಾ, ಪೂರ್ಣಚಂದ್ರ ಅವರನ್ನು ಅಗಲಿದ್ದು, ಇವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ , ಎಎಸ್‍ಪಿ ಮಂಜುನಾಥ್ ಹಾಗೂ ಠಾಣೆ ಸಿಬ್ಬಂದಿಗಳು ಕೋರಿದರು.

Facebook Comments

Sri Raghav

Admin