ಹೃದಯ ಸ್ಪರ್ಶಿಸುವ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ : ಅಮೀರ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

3

ಬ್ಯಾಕ್-ಟು-ಬ್ಯಾಕ್ ಬ್ಲಾಕ್‍ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಸೂಪರ್‍ಸ್ಟಾರ್ ಅಮೀರ್ ಖಾನ್ ತನ್ನ ಹೃದಯ ಸ್ಪರ್ಶಿಸುವ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಈ ಪ್ರತಿಭಾನ್ವಿತ ಹಣದ ಲೆಕ್ಕಾಚಾರದ ಮೇಲೆ ಹೊಸ ಪ್ರಾಜೆಕ್ಟ್‍ಗೆ ಸಹಿ ಹಾಕುವುದಿಲ್ಲವಂತೆ.3 ಈಡಿಯೆಟ್ಸ್, ಧೂಮ್-3, ಪಿಕೆ ಮತ್ತು ದಂಗಲ್‍ನಂಥ ಸೂಪರ್‍ಹಿಟ್ ಸಿನಿಮಾಗಳನ್ನು ನೀಡಿರುವ ಅಮೀರ್ ತಮ್ಮ ಚಿತ್ರಗಳ ಆಯ್ಕೆ ಸೂತ್ರವನ್ನು ಹೇಳಿಕೊಂಡಿದ್ದಾರೆ. ಯಾವ ಸಿನಿಮಾ ಎಷ್ಟು ಹಣ ಗಳಿಸುತ್ತದೆ. ಬಾಕ್ಸ್ ಆಫೀಸ್‍ನಲ್ಲಿ ಎಷ್ಟು ಗಳಿಸುತ್ತದೆ ಎಂಬ ಆಧಾರದ ಮೇಲೆ ನಾನು ಚಿತ್ರವನ್ನು ಆಯ್ಕೆ ಮಾಡುವುದಿಲ್ಲ. ನನ್ನ ಮನಸ್ಸಿಗೆ ಹಿಡಿಸಿದ ಮತ್ತು ಹೃದಯ ಸ್ಪರ್ಶಿಸುವ ಪ್ರಾಜೆಕ್ಟ್‍ಗಳನ್ನೂ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಎಂದು 51 ವರ್ಷದ ಖಾನ್ ಹೇಳುತ್ತಾರೆ.ಇತ್ತೀಚೆಗೆ ಬಿಡುಗಡೆಯಾದ ದಂಗಲ್ ಬಾಲಿವುಡ್‍ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಈ ಚಿತ್ರ ಪಾಕಿಸ್ತಾನದಲ್ಲಿ ತೆರೆಕಂಡರೆ ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಮೇಲಾಗಿ ಇದನ್ನು ಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರು ನಿರ್ಧರಿಸುತ್ತಾರೆ ಎಂದು ಅಮೀರ್ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin