ಹೆಂಡತಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು ಬಂದು ಪೊಲೀಸ್ ಠಾಣೆಗೆ ಶರಣಾದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Beat

ಶಿವಮೊಗ್ಗ, ಅ.2– ಪತ್ನಿಯನ್ನು ಸುತ್ತಿಗೆಯಿಂದ ಕೊಲೆಗೈದ ಪತಿ ನಂತರ ಠಾಣೆಗೆ ಬಂದು ಶರಣಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಜಯಂತಿ ಗ್ರಾಮದ ನಿವಾಸಿ ರೇಣುಕಾ ಕೊಲೆಯಾದ ಪತ್ನಿ. ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿದ್ದು, ಪತಿ ತಿಮ್ಮ ಪತ್ನಿ ರೇಣುಕಾಗೆ ಸುತ್ತಿಗೆಯಿಂದ ಹೊಡೆದು ಕೊಲೆಗೈದಿದ್ದಾನೆ. ನಂತರ ಆತನೇ ಗ್ರಾಮಾಂತರ ಠಾಣೆಗೆ ಹೋಗಿ ಶರಣಾಗಿದ್ದಾನೆ.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin