ಹೆಂಡತಿಯೂ ಕೈಕೊಟ್ಟಳು, ಬೈಕ್ ಕೂಡ ಕೈ ಕೊಡ್ತು, ರೊಚ್ಚಿಗೆದ್ದ ಗಂಡ ಮಾಡಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Bike-Fire--01

ತುಮಕೂರು, ಡಿ.17-ಕೈ ಕೊಟ್ಟ ಹೆಂಡತಿ, ಕೈಕೊಟ್ಟ ಬೈಕ್ ಇದರಿಂದ ಬೇಸತ್ತ ಈತ ಮಾಡಿದ್ದೇನು ಗೊತ್ತೆ… ನಡುರಸ್ತೆಯಲ್ಲೇ ಬೈಕ್‍ಗೆ ಬೆಂಕಿ ಹಚ್ಚಿದ… ಬೈಕ್ ಧಗಧಗನೆ ಉರಿದುಹೋಯ್ತು. ಈತನ ಈ ಅವಾಂತರಕ್ಕೆ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದರು. ಸಿಹಿನೀರು ಬಾವಿ ಬಳಿಯ ನಿವಾಸಿ ನಾಗೇಶ್ ಹೆಂಡತಿ ಕೈಕೊಟ್ಟಳೆಂದು ಕುಡಿದ ಅಮಲಿನಲ್ಲಿ ತನ್ನ ಬೈಕ್‍ಗೆ ಬೆಂಕಿ ಹಚ್ಚಿ ಸುಟ್ಟು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಹೆಂಡತಿಯಿಂದ ಬೇಸತ್ತ ಈತ ಮಧುಗಿರಿ ಪಟ್ಟಣದಲ್ಲಿ ಕುಡಿದು ವಾಹನ ಚಲಾಯಿಸುತ್ತಿದಾಗ ಮೊಪೈಡ್ ಬೈಕ್ ಕೆಟ್ಟು ನಿಂತಿತ್ತು. ಇನ್ನಷ್ಟು ಬೇಸರಗೊಂಡ ಈತ ನಡುರಸ್ತೆಯಲ್ಲಿ ಬೈಕ್‍ಗೆ ಬೆಂಕಿ ಹಚ್ಚಿಯೇ ಬಿಟ್ಟ. ಈತನ ಈ ಕೃತ್ಯಕ್ಕೆ ಸುತ್ತಮುತ್ತಲಿನ ಈ ಜನ ಬೆಚ್ಚಿಬಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin