ಹೆಂಡದ ಅಮಲಿನಲ್ಲಿ ಹೆಂಡತಿಯನ್ನು ಕೊಚ್ಚಿಕೊಂದು ಪರಾರಿಯಾದ ಗಂಡ

ಈ ಸುದ್ದಿಯನ್ನು ಶೇರ್ ಮಾಡಿ

Wife-Murder--01

ಕೋಲಾರ, ಏ.25- ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಶಿಡ್ಲಘಟ್ಟದವಳಾದ ಶ್ಯಾನುಮಾ (42) ಕೊಲೆಯಾದ ಪತ್ನಿ.  ವಿವರ: ಕಳೆದ 25 ವರ್ಷಗಳ ಹಿಂದೆ ಕೋಲಾರ ತಾಲ್ಲೂಕಿನ ಚಾಲನೂರು ಗ್ರಾಮದ ಅಲ್ಲಾ ಬಕಾಶ್ ಶ್ಯಾನುಮಾಳನ್ನು ವಿವಾಹವಾಗಿದ್ದ. 10 ತಿಂಗಳ ಹಿಂದೆಯಷ್ಟೇ ಶಿಡ್ಲಘಟ್ಟದಲ್ಲಿ ಅಕ್ಕ ಪಕ್ಕದವರ ಜತೆ ಜಗಳವಾಡಿಕೊಂಡು ಚಾಲನೂರಿಗೆ ಬಂದು ಶ್ಯಾನುಮಾಳೊಂದಿಗೆ ಈತ ನೆಲೆಸಿದ್ದ. ಅಲ್ಲಾ ಬಕಾಶ್ ಅತಿಯಾಗಿ ಕುಡಿಯುತ್ತಿದ್ದ. ಕುಡಿದ ಜಗಳ ತೆಗೆಯುತ್ತಿದ್ದ. ಕಳೆದ ನಾಲ್ಕು ದಿನಗಳ ಹಿಂದೆ ಕುಡಿದು ಬಂದು ಅಮಲಿನಲ್ಲಿ ಪತ್ನಿಯನ್ನು ಕೊಂದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ.

ನಿನ್ನೆ ಶ್ಯಾನುಮಾಳ ಅಕ್ಕನಿಗೆ ವಿಷಯ ತಿಳಿಸಿ ತಲೆಮರೆಸಿಕೊಂಡಿದ್ದಾನೆ. ಆಕೆ ತಕ್ಷಣ ತಾಯಿಗೆ ಈ ಸುದ್ದಿ ತಿಳಿಸಿದ್ದಾಳೆ. ನಂತರ ಶ್ಯಾನುಮಾಳ ಸಹೋದರರಿಗೆ ವಿಷಯ ಗೊತ್ತಾಗಿ ಇಂದು ಮನೆಗೆ ಬಂದು ನೋಡಿ ವೇಮಗಲ್ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸಪಟ್ , ವೇಮಗಲ್ ಠಾಣೆ ಇನ್ಸ್‍ಪೆಕ್ಟರ್ ರಾಜಣ್ಣ, ಸಬ್ ಇನ್ಸ್‍ಪೆಕ್ಟರ್ ಕೇಶವಮೂರ್ತಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.   ದೇಹ ಕೊಳೆತು ಹೂಳು ಹುಪ್ಪಟ್ಟೆ ತಿಂದಿದ್ದು ವಿಕಾರವಾಗಿ ಬಿಟ್ಟಿದೆ. ಅಲ್ಲಾ ಬಕಾಶ್‍ಗಾಗಿ ಹುಡುಕಾಟ ನಡೆದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin