ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಟಾಪ್ 20 ನಟರ ಪಟ್ಟಿಯಲ್ಲಿ ಎಸ್‌ಆರ್‌ಕೆ

ಈ ಸುದ್ದಿಯನ್ನು ಶೇರ್ ಮಾಡಿ

sharukh

ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್ ಖ್ಯಾತಿ ಅಂತರರಾಷ್ಟ್ರೀಯ ಮಟ್ಟದಲ್ಲೂ ರಾರಾಜಿಸುತ್ತಿದೆ. ವಿಶ್ವದ ಅತ್ಯಕ ಸಂಭಾವನೆ ಪಡೆಯುವ ಟಾಪ್ 20 ನಟರ ಪಟ್ಟಿಯಲ್ಲಿ ಎಸ್‌ಆರ್‌ಕೆ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅವರೂ ಈ ಪಟ್ಟಿಯಲ್ಲಿರುವುದು ಹೆಗ್ಗಳಿಕೆಯ ಸಂಗತಿ.  ಇತ್ತೀಚಿಗೆ ತೆರೆಕಂಡ ಚಿತ್ರಗಳಲ್ಲಿ ಈ ಸೂಪರ್‌ಸ್ಟಾರ್‌ಗಳು ಪಡೆದ ಸಂಭಾವನೆ ಮತ್ತು ಗಳಿಕೆಯನ್ನು ಪರಿಗಣಿಸಿ 2016ರ ಫೋರ್ಬ್ಸ್ ನಿಯತಕಾಲಿಕ ಟಾಪ್ 20 ವರ್ಲ್ಡ್ಸ್ ಹೈಯೆಸ್ಟ್ ಪೇಯ್ಡ್ ಆಕ್ಟರ್ ಪಟ್ಟಿ ಪ್ರಕಟಿಸಿದೆ. ಚಿತ್ರನಟನಾಗಿ ಪರಿವರ್ತಿತನಾದ ದೈತ್ಯ ಕುಸ್ತಿ ಪಟು ಡ್ವೆಯ್ನೆ ಜನ್ಸ್‌ನ ಪ್ರಥಮ ಸ್ಥಾನದಲ್ಲಿದ್ದಾರೆ. ಶಾರುಕ್ ಖಾನ್ 33 ದಶಲಕ್ಷ ಡಾಲರ್ ಸಂಭಾವನೆಯೊಂದಿಗೆ ಹಾಲಿವುಡ್ ಹೆವಿ ವೇಟ್ ರಾಬರ್ಟ್ ಡೌನ್ನೆ ಜ್ಯೂನಿಯರ್ ಅವರೊಂದಿಗೆ 8 ಸ್ಥಾನದಲ್ಲಿ ಪಾಲು ಪಡೆದಿದ್ದಾರೆ.

31.5 ದಶಲಕ್ಷ ಡಾಲರ್ ಗಳಿಕೆಯೊಂದಿಗೆ ಹಾಲಿವುಡ್‌ನ ಮತ್ತೊಬ್ಬ ಸೂಪರ್‌ಸ್ಟಾರ್ ಬ್ರಾಡ್ ಪಿಟ್ ಅವರೊಂದಿಗೆ ಅಕ್ಷಯ್ ಕುಮಾರ್ 10ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ಲಿಯೋನಾರ್ಡೊ ಡಿಕ್ಯಾಪ್ರಿಯೋ ಅವರನ್ನು ಹಿಂದಿಕ್ಕಿರುವ ಸಲ್ಮಾನ್ ಖಾನ್ 14ನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್‌ಗೆ ಈ ಪಟ್ಟಿಯಲ್ಲಿ 18ನೇ ಸ್ಥಾನ (20 ದಶಲಕ್ಷ ಡಾಲರ್). ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ಮ್ಯಾಥ್ಯೂ ಮ್ಯಾಕ್‌ನೌಗ್ಹೆ (19ನೇ ಸ್ಥಾನ) ಹಾಗೂ ಸ್ಟಾರ್‌ವಾರ‍್ಸ್ ಲೆಜೆಂಡ್ ಹ್ಯಾರಿಸನ್ ಫೋರ್ಡ್ (20ನೇ ಸ್ಥಾನ) ನಂತರದ ಸ್ಥಾನದಲ್ಲಿದ್ದಾರೆ. ಬಾಲಿವುಡ್‌ನ ನೀಳಕಾಯದ ಬೆಡಗಿ ದೀಪಿಕಾ ಪಡುಕೋಣೆ 10 ದಶಲಕ್ಷ ಡಾಲರ್‌ಗಳ ಸಂಭಾವನೆಯೊಂದಿಗೆ ಫೋರ್ಬ್ಸ್ ಲಿಸ್ಟ್ ನಲ್ಲಿ 10ನೇ ಸ್ಥಾನ ಗಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

► Follow us on –  Facebook / Twitter  / Google+

Facebook Comments

Sri Raghav

Admin