ಹೆಜ್ಜಾಲ ಗೌಡರ ಕೆರೆಯ ಹೂಳು ತೆರವು : ಡಿಸಿ ವೀಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ramanagara

ರಾಮನಗರ, ಏ.6- ತಾಲ್ಲೂಕಿನ ಬಿಡದಿ ವ್ಯಾಪ್ತಿಯ ಹೆಜ್ಜಾಲದಲ್ಲಿರುವ, ಹೆಜ್ಜಾಲ ಗೌಡರ ಕೆರೆಯಲ್ಲಿ ತುಂಬಿರುವ ಹೂಳನ್ನು ಸ್ಥಳೀಯ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುತ್ತಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆರೆಯ ಹೂಳನ್ನು ತೆಗೆಯಲು ಸಹಕರಿಸುತ್ತಿದ್ದ ತಾಪಂ ಸದಸ್ಯರೂ ಆದ ಕಾಣಕಲ್ ನಟರಾಜ್, ಸ್ಥಳೀಯ ಯುವಕರು ಹಾಗೂ ರೈತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಯವರು, ಹೆಜ್ಜಾಲ ಗೌಡರ ಕೆರೆ ಜಿಪಂ ವ್ಯಾಪ್ತಿಗೆ ಒಳಪಡುವುದರಿಂದ ಈ ಕೆರೆಯಲ್ಲಿ ಹೂಳೆತ್ತುವ ಸಂಬಂಧ ಪ್ರಸ್ತಾವನೆಯನ್ನು ಸಿದ್ದಪಡಿಸಿ, ಜಿಪಂಚಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಲ್ಲಿಸಿ, ಅವರಿಂದ ಅನುಮತಿ ಪಡೆಯಬೇಕು ಎಂದರು.

ನಂತರದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‍ಗಳು ಕೆರೆಯ ಉದ್ದ, ಅಗಲಗಳ ವಿಸ್ತೀರ್ಣ ಅಳತೆ ಮಾಡಿ ಹೂಳೆತ್ತುವ ಕಾರ್ಯ ಕೈಗೊಳ್ಳುತ್ತಾರೆ. ಈ ಸಮಾಜಮುಖಿ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ನಿಂದಲೂ ಅಗತ್ಯ ನೆರವು ನೀಡಲು ಸಿದ್ದವಿದ್ದು, ಉಪಗ್ರಹ ಆಧಾರಿತ ಕೆರೆಯ ಚಿತ್ರ ರಚಿಸಿ ಕೊಡಲಾಗುವುದು, ಇದು ಕೆರೆಯ ಹೂಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಲು ಸಹಕಾರಿಎಂದು ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಮೂರು ಜೆಸಿಬಿ ಯಂತ್ರಗಳು ತೆಗೆದ ಕೆರೆಯ ಹೂಳನ್ನು ರೈತರು ತಮ್ಮ ಟ್ರಾಕ್ಟರ್‍ಗಳ ಮೂಲಕ ತಮ್ಮ ಹೊಲಗಳಿಗೆ ಸಾಗಿಸಿದರು. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಯುವಕರು ಹಾಗೂ ರೈತರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin