ಹೆಣ್ಣಿನ ಅನುಪಾತ ಕುಸಿತ ಸಮಾಜಕ್ಕೆ ಹಾನಿಕಾರಕ

ಈ ಸುದ್ದಿಯನ್ನು ಶೇರ್ ಮಾಡಿ

female

ಕೋಲಾರ,ಅ.27-ಹೆಣ್ಣಿನ ಅನುಪಾತ ದಿನೇ ದಿನೇ ಕುಸಿಯುತ್ತಿದೆ. ಇದು ಸಮಾಜಕ್ಕೆ ಹಾನಿಕಾರಕ. ಇದನ್ನು ಸರಿಪಡಿಸಲು ಸಮಾಜದ ಎಲ್ಲರೂ ಕೈ ಜೋಡಿಸಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಬೇಕೆಂದು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ ಹೇಳಿದರು. ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ನಟೋಡಿಸ್ಟ್ ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಕುಟುಂಬ ಇಲಾಖೆ ಸಂಯುಕ್ತಾಶ್ರಯದಲ್ಲಿ ಪ್ರವಾಸಿ ಮಂದಿರದ ಮುಂದೆ ಹಮ್ಮಿಕೊಂಡಿದ್ದ ಹೆಣ್ಣು ಮಗು ಉಳಿಸಿ ಆಂದೋಲನಾ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗಂಡು ಮಕ್ಕಳಿಗೆ ಕೊಡುವ ಪ್ರೊ ತ್ಸಾಹವನ್ನು ಸಮಾಜ ಹೆಣ್ಣು ಮಕ್ಕಳಿಗೂ ಕೊಟ್ಟರೆ ಗಂಡು ಮಕ್ಕಳನ್ನು ಮೀರಿಸುವಲ್ಲಿ ಯಾವ ಸಂದೇಹ ಇಲ್ಲ ಎಂದು ಹೇಳಿದರು.

ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು, ಈಗ ಸಾವಿರ ಗಂಡು ಮಕ್ಕಳಿಗೆ 978 ಮಹಿಳೆಯರು ಮಾತ್ರ ಇರುವುದು ದುರಂತ ಎಂದರು. ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಇದರ ಅನುಪಾತ ಇನ್ನು ಕುಸಿದಿದ್ದು , ಸಾವಿರಕ್ಕೆ 828 ಮಹಿಳೆಯರು ಇದ್ದಾರೆ. ಗಂಡು-ಹೆಣ್ಣು ಎಂದು ನಿರ್ಧರಿಸುವುದು ಪ್ರಕೃತಿ ನಿಯಮ ಇದನ್ನು ಬದಲಿಸುವುದು ಸಾಧ್ಯವಿಲ್ಲ. ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಭ್ರೂಣ ಹತ್ಯೆ ಪ್ರಕರಣ ಎಲ್ಲೂ ದಾಖಲಾಗಿಲ್ಲ. ಜಿಲ್ಲೆಯಲ್ಲಿ 35 ಸ್ಕ್ಯಾನ್ ಸೆಂಟರ್ ಇದ್ದರೂ 25ರಲ್ಲಿ ತಪಾಸಣೆ ನಡೆಸಿದೆ. ಯಾವುದೆ ಪ್ರಕರಣ ಕಂಡುಬಂದಿಲ್ಲ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುರುರಾಜ ಜಿ.ಶಿರೋಳಾ, ನ್ಯಾಯಾಧೀಶರಾದ ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ರಾಮಕೃಷ್ಣ , ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್, ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin