ಹೆಣ್ಣುಬ್ರೂಣ ಹತ್ಯೆಯಿಂದ ಸಮಾಜದ ಮೇಲೆ ದುಷ್ಪರಿಣಾಮ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಜ.14- ದೇಶದಾದ್ಯಂತ ಹೆಣ್ಣು ಬ್ರೂಣ ಹತ್ಯೆ ಹೆಚ್ಚಾಗುತ್ತಿರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಮುಂದೆ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅ.ಶಿ.ವೈ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ಶಿವಕುಮಾರ್ ತಿಳಿಸಿದರು. ಅವರು ಇಲ್ಲಿನ ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ. ಅ.ಶಿ.ವೈ ನಗರ್ತ ಮಹಿಳಾ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಅಟ್ಟಗುಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಬಹು ಹಿಂದಿನಿಂದಲೂ ನಗರ್ತ ಜನಾಂಗವು ಹೆಣ್ಣು ಮಕ್ಕಳ ಒಳಿತಿಗಾಗಿ ಅಟ್ಟಗುಣಿ ಕಾರ್ಯಕ್ರಮವನ್ನು ಮಹಿಳಾ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಟ್ಟಗುಣಿ ವಿಶೇಷ:-

ಬನದ ಹುಣ್ಣಿಮೆಯಂದು 2 ವರ್ಷದಿಂದ 12 ವರ್ಷದವರೆಗಿನ ಹೆಣ್ಣು ಮಕ್ಕಳ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಮಕ್ಕಳು ನೂತನ ವಸ್ತ್ರಗಳನ್ನು ಧರಿಸಿ, ದೇವಾಲಯಕ್ಕೆ ಆಗಮಿಸಿ, ಆಚಾರರ ಮನೆಗೆ ತೆರಳಿ, ಮಾಳಮ್ಮ ದೇವತೆಯನ್ನು ಉಡಿ ತುಂಬಿ ತಂದು, ಕುದುರುಸುತ್ತಾರೆ. ಒಳಿತಿನ ನಂಬಿಕೆ :-ಈ ಆಚರಣೆಯಿಂದ ಮಕ್ಕಳಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಬೇರೂರಿದ್ದು, ಅದಕ್ಕಾಗಿ ಸಾಕ್ಷಿ ಎಂಬಂತೆ ವಿಜಯಪುರ ಹಾಗೂ ಸುತ್ತಮುತ್ತಲ ಊರುಗಳ ಮಹಿಳೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ಶಿವಕುಮಾರ್, ಮಾಜಿ ಅಧ್ಯಕ್ಷರುಗಳಾದ ರೂಪ ಭಾಸ್ಕರ್, ಭಾರತಿ ಶಿವಪ್ರಸಾದ್, ರಜನಿ ದಿನೇಶ್, ಸದಸ್ಯರಾದ ಪ್ರಶಾಂತಿನಿ ಚಂದ್ರಕುಮಾರ್, ಪ್ರತಿಭಾ ಮಹೇಶ್, ಕುಸುಮ ಜಯಶಂಕರ್, ಅಕ್ಕನ ಬಳಗದ ಕಾಮಾಕ್ಷಮ್ಮ, ಅಂಬಾ ಬಸವರಾಜು, ಮಹದೇವಮ್ಮ ಬಸವರಾಜು, ಭಾಗ್ಯಾಶ್ಯಾಂ, ಇನ್ನರ್‍ವ್ಹೀಲ್‍ನ ಮಾಲತಿ ಆನಂದಕುಮಾರ್, ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ನೂರಾರು ಮಹಿಳೆಯರು ತಮ್ಮ ಮಕ್ಕಳನ್ನು ಕರೆತಂದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin