ಹೆಣ್ಣುಮಕ್ಕಳನ್ನು ಗೌರವಯುತವಾಗಿ ಕಾಣಿ

ಈ ಸುದ್ದಿಯನ್ನು ಶೇರ್ ಮಾಡಿ

dharawad
ಧಾರವಾಡ,ಮಾ.28- ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಹುಟ್ಟಿದರೆ ಆ ಮೂರನೆ ಮಗುವಿಗೆ ನಖುಷಿ ಎಂದು ಕರೆಯುತ್ತಾರೆ. ಅಂದರೆ ಆ ಮಗುವಿನಿಂದ ಯಾವುದೇ ಸಂತೋಷ, ಸುಖವಿಲ್ಲವೆಂದರ್ಥದಲ್ಲಿ ಆ ಮಗುವನ್ನು ಪರಿಗಣಿಸುವ ಮನೋಧರ್ಮ ಹೋಗಬೇಕು. ಪ್ರತಿಯೊಬ್ಬ ಹೆಣ್ಣುಮಗುವನ್ನು ಸಮಾಜ ಗೌರವಯುತವಾಗಿ ಕಾಣಬೇಕು ಎಂದು ಜಿಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಚೈತ್ರಾ ಶಿರೂರ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ನಾಗರಿಕ ಮಿತ್ರ ಸಂಸ್ಥೆ, ನೆಹರು ಯುವ ಕೇಂದ್ರ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಜಿಲ್ಲೆಯ ಎಲ್ಲ ಯುವತಿ ಮಂಡಳಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಜಿಲ್ಲಾ ಯುವ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಮಾಜ ಮೂಢ ನಂಬಿಕೆಗಳಿಂದ ಹೊರಬಂದು ಹೊಸ ಸಮಾಜವನ್ನು ಕಟ್ಟಲು ಯುವ ಸಮುದಾಯ ಸಜ್ಜಾಗಬೇಕಾಗಿದೆ. ಇದಕ್ಕಾಗಿ ಯುವ ಸಂಘಗಳು ಸಜ್ಜಾಗಬೇಕಾಗಿದೆ. ಪ್ರತಿಯೊಬ್ಬ ಮಹಿಳೆಯರು ಜೀವ ಜಲವಾದ ನೀರನ್ನು ಮಿತವಾಗಿ ಬಳೆಸಿ, ಸದ್ಬಳಕೆಯ ಕಡೆಗೆ ಆದ್ಯತೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ಸಮಾಜ ಸೇವೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ನವಲಗುಂದ ತಾಲೂಕು ಅಣ್ಣಿಗೇರಿ ಶ್ರೀ ನೇತಾಜಿ ಸ್ಪೋಟ್ರ್ಸ್ ಕ್ಲಬ್‍ಗೆ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಆಯ್ದ ಸಂಘಗಳಿಗೆ ನೆಹರು ಯುವ ಕೇಂದ್ರದಿಂದ ಕ್ರೀಡಾ ಸಾಮಗ್ರಿಗಳನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಚೈತ್ರಾ ಶಿರೂರ ಅವರು ವಿತರಿಸಿದರು.ಇಂದಿನ ಸಮಾಜದಲ್ಲಿ ಮಹಿಳೆಯರು ಬಹಳ ಶ್ರಮಜೀವಿಯಾಗಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಯ ಅವಶ್ಯಕತೆ ಇದ್ದು, ನೆಹರು ಯುವ ಕೇಂದ್ರವು ವಿವಿಧ ಸಂಘಗಳ ಮೂಲಕ ಸ್ವಯಂ ಉದ್ಯೋಗ ತರಬೇತಿಯಂಥ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸ್ವಾವಲಂಬಿಗಳಾಗಿ ಬದುಕಲು ಮಹಿಳೆಯರಿಗೆ ಪ್ರೋ ನೀಡುತ್ತಿದೆ ಎಂದು ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ ಹೇಳಿದರು.
ಮಹಿಳೆಯರಿಲ್ಲದೇ ಸಮಾಜ ಪರಿಪೂರ್ಣವಾಗಲಾರದು, ಪ್ರತಿಯೊಬ್ಬ ಮಹಿಳೆಯಲ್ಲೂ ನಾವು ಪರಮಾತ್ಮನನ್ನು ಕಾಣುತ್ತೇವೆ. ಪ್ರತಿಯೊಬ್ಬ ಪುರುಷರು ಮಹಿಳೆಯನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಮೇಲಾಗುತ್ತಿರುವ ದೌರ್ಜನಗಳು ನಿಲ್ಲಬೇಕು ಎಂದು ಬಸವ ಪೀಸ್ ಮಿಶನ್ ಸಂಸ್ಥಾಪಕರಾದ ಮಹದೇವ ಹೊರಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕವಿವಿ ಸಿಂಡಿಕೇಟ ಸದಸ್ಯರಾದ ದೇವಕಿ ಯೋಗಾನಂದ ಮಾತನಾಡಿ, ಈ ಹಿಂದಿನ ದಿನಮಾನಗಳಲ್ಲಿ ಮಹಿಳೆಯರು ಪಡುತ್ತಿದ್ದ ಸಂಕಷ್ಟ ಈಗೀನ ಮಹಿಳೆಯರಿಗೆ ಇಲ್ಲಾ. ತಾವು ಸರಕಾರದಿಂದ ಸಿಗುವ ಸವಲತ್ತು, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಸಮಾಜ ಆರ್ಥಿಕ ಅಭಿವೃದ್ಧಿಯಲ್ಲಿ ಪಾಲುದಾರರಾಗಿ ಎಂದರು.ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಇಸ್ಲಾಯಿಲ್ ತಮಟಗಾರ ಮಾತನಾಡಿ, ದೇಶದ ಪ್ರಗತಿಗಾಗಿ ಮಹಿಳೆಯರ ಪಾತ್ರ ಬಹು ಮುಖ್ಯವೆಂದು ಈಗಿನ ಸಮಾಜಕ್ಕೆ ಅರಿವಾಗುತ್ತಿದೆ.

ಈಗಿನ ಪರಿಸ್ಥಿತಿಯಲ್ಲಿ ಶೇಕಡಾವಾರು ಮಹಿಳೆಯರು 50 ರಿಂದ 70 ರಷ್ಟು ಯುವ ಜನರು ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿರುವುದು ಸಮಾಜಕ್ಕೆ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಹಿಳಾ ಸಂಘಗಳ ಮುಖಾಂತರ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಶಿರೂರ ಇವರನ್ನು ಹಾಗೂ ಶ್ರೀಮತಿ ದೇವಕಿ ಯೋಗಾನಂದ ಅವರನ್ನು ಸನ್ಮಾನಿಸಲಾಯಿತು. ಎಸ್.ಎಮ್. ಮುಲ್ಲಾ ಮಾತನಾಡಿದರು. ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಪ್ರಕಾಶ ಬಾಳಿಕಾಯಿ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಅನಿಲ ಪುರಾಣಿಕ, ನಯನಾ ಮಹಾಲೆಯವರ, ಕಾವ್ಯ ಎಸ್.ಚಿಕ್ಕಮಠ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin