ಹೆಣ್ಣು ಕೊಡಿಸುವ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Eesanje.....

ಚನ್ನಪಟ್ಟಣ, ಸೆ.20- ಹೆಣ್ಣು ಕೊಡಿಸುವ ವಿಚಾರದಲ್ಲಿ ಬಾರ್‍ನಲ್ಲಿ ಜಗಳ ಮಾಡಿಕೊಂಡು ನಂತರ ಗ್ರಾಮದಲ್ಲಿ ಹೊಡೆದಾಟ ನಡೆದು ವ್ಯಕ್ತಿಯೋಬ್ಬನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಣಂತಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಲ್ಲೂಕಿನ ಬಾಣಂತಹಳ್ಳಿ ಗ್ರಾಮದ ರಾಜು ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಈತನ ಮೇಲೆ ಅದೇ ಗ್ರಾಮದ ರಾಜು, ಕುಮಾರ, ಕೃಷ್ಣ, ದೇಸಿ, ವೆಂಕಟಯ್ಯ, ಕಬ್ಬಾಳಯ್ಯ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಹೆಣ್ಣು ಕೊಡಿಸುವವಿಚಾರಕ್ಕೆ ಕೋಡಂಬಳ್ಳಿಯ ಬಾರ್‍ನಲ್ಲಿ ಸಣ್ಣದಾಗಿ ರಾಜು ಹಾಗೂ ಇತರರಿಗೂ ಗಲಾಟೆ ನಡೆಯಿತ್ತೆನ್ನಲಾಗಿದ್ದು, ಕೆಲವರ ಮಧ್ಯ ಪ್ರವೇಶದಿಂದ ಗಲಾಟೆ ಶಮನಗೊಂಡಿತ್ತಾದರೂ ಗ್ರಾಮಕ್ಕೆ ಹೋದ ಮೇಲೆ ಇದೇ ಗಲಾಟೆ ಮಾರಾಮಾರಿಯಾಗಿದೆ.
ತಲೆಗೆ ಭಾರೀ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾದ ರಾಜು ರಕ್ಷಣೆಗೆ ನಿಂತ ತಾಯಿ ಕಾಳಮ್ಮಳ ಮೇಲೂ ಗುಂಪು ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಲಿಸಲಾಗಿದೆ.ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿಎಸ್‍ಐ ಸದಾನಂದ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನಿಂದ ಮಾಹಿತಿ ಪಡೆದ ಅರ್ಧತಾಸಿನಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin