ಹೆಣ್ಣು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

hiriseve-4

ಹಿರೀಸಾವೆ, ಆ.16- ಕೆಲವು ಗ್ರಾಮೀಣ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಅಂತಹ ಹೆಣ್ಣುಮಕ್ಕಳನ್ನು ಹುಡುಕಿ ಅವರಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡಬೇಕಾಗಿರುವುದು ಶಿಕ್ಷಕರ ಕರ್ತವ್ಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜೆ. ಮಹೇಶ್ ಹೇಳಿದರು.70 ನೇ ವರ್ಷದ ಸ್ವತಂತ್ರ ದಿನಾಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಶಿಕ್ಷಕ ಬೋರೇಗೌಡ ಮಾತನಾಡುತ್ತಾ, ನಾವುಗಳು ಇಂದು 70 ವರ್ಷದ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.

ನಿಜವಾಗಿಯೂ ನಮಗೆ ಸ್ವತಂತ್ರ ಸಿಕ್ಕಿದೆಯಾ ಎಂದು ಯೋಚಿಸಬೇಕಾಗಿದೆ ಎಂದರು.ಶಾಲೆಗಳಲ್ಲಿ ಉತ್ತಮ ಕರ್ತವ್ಯ ನೀಡಿದ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಧರ್ಮೆಶ್, ಬಾಲಕರ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಎನ್. ಶೈಲಜಾ, ಕಾರ್ತಿಕ್ ಪಬ್ಲಿಕ್ ಶಾಲೆಯ ಶಿಕ್ಷಕ ಜಯರಾಮ್, ನರೇಂದ್ರ ಪ್ರೌಢಶಾಲೆಯ ಶಿಕ್ಷಕ ನರಸಿಂಹಮೂರ್ತಿ, ಶಾರದಾನಿಕೇತನ ವಿದ್ಯಾಸಂಸ್ಥೆಯ ಶಿಕ್ಷಕ ಆನಂದಕುಮಾರ್, ಸರಕಾರಿ ಬಾಲಕಿಯರ ಪ್ರೌಢಶಶಾಲೆಯ ಶಿಕ್ಷಕ ಜಿ.ಎನ್. ಶ್ರೀಕಂಠಯ್ಯ ಬಾಲಕಿಯರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎಲ್. ವೇಣುಗೋಪಾಲ್, ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಎ.ಆರ್. ಚಂದ್ರಶೇಖರ್ ಇವರುಗಳನ್ನು ಸನ್ಮಾನಿಸಲಾಯಿತು.
ಪಟ್ಟಣದ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲೀಕ ಲೋಕೇಶ್ ಎಲ್ಲಾ ಶಾಲೆಗಳಿಗೂ ಕ್ರಾಂತಿವೀರ ಭಗತ್‍ಸಿಂಗ್ ಅವರ ಭಾವಚಿತ್ರಗಳನ್ನು ವಿತರಿಸಿದರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಾಮೂರ್ತಿ ಸ್ಟೋರ್ಸ್ ಮಾಲೀಕ ನರಸಿಂಹಮೂರ್ತಿ ಕನ್ನಡ ಡಿಕ್ಸನರಿಯನ್ನು ನೀಡಿದರು.ಪ್ರಾಂಶುಪಾಲ ಸಿ.ಆರ್. ವಾಮರಾಜ್, ಜಿಪಂ ಸದಸ್ಯ ಸಿ. ಮಂಜೇಗೌಡ. ಜಿಪಂ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ತಾಪಂ ಸದಸ್ಯೆ ಶಾಮಲಾ ಉದಯಕುಮಾರ್, ತಾಪಂ ಮಾಜಿ ಸದಸ್ಯ ಎಚ್.ಎಸ್. ರವಿಕುಮಾರ್, ಹಿರೀಸಾವೆ ಗ್ರಾಪಂ ಸದಸ್ಯರುಗಳಾದ ಎಚ್.ಕೆ. ವೆಂಕಟೇಶ್, ಪುಟ್ಟರಾಜು, ಎಚ್.ಈ. ಬೋರಯ್ಯ, ಸುಜಾತ ಮಂಜುನಾಥ್, ಸಂತೋಷ್, ಎಲ್ಲಾ ಶಾಲೆಯ ಶಿಕ್ಷಕರುಗಳು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.ಗ್ರಾಪಂ ವತಿಯಿಂದ ಎಲ್ಲಾ ಮಕ್ಕಳಿಗೂ ಲಘು ಉಪಹಾರವನ್ನು ಏರ್ಪಡಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin