ಹೆತ್ತ ಮಗುವನ್ನು ಜೀವಂತವಾಗಿ ಹೂತಿಟ್ಟ ಮಹಾತಾಯಿ..! ಇಂತಾ ತಾಯಿನೂ ಇರ್ತಾಳೆ..?

ಈ ಸುದ್ದಿಯನ್ನು ಶೇರ್ ಮಾಡಿ

Baby--001

ಚಿಂತಾಮಣಿ, ಮಾ.23- ಇಡೀ ಪ್ರಪಂಚದಲ್ಲೇ ಕೆಟ್ಟ ತಾಯಿ ಇರಲ್ಲ ಎಂಬ ಭಾವನೆ ಇದುವರೆಗೂ ಇತ್ತು. ಆದರೆ, ಕಾಲ ಬದಲಾದಂತೆ ತಾಯಿ ಕೂಡ ಬದಲಾಗಿದ್ದಾಳೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.  ಮಹಾತಾಯಿಯೊಬ್ಬಳು ತಾನು ಹೆತ್ತ ಕಂದಮ್ಮನನ್ನೇ ಜೀವಂತವಾಗಿ ಮಣ್ಣಿನಲ್ಲಿ ಹೂತು ಪರಾರಿಯಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಗಡದಾಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾತ್ಯಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ನವಜಾತ ಗಂಡು ಶಿಶುವನ್ನು ಜೀವಂತವಾಗಿ ಮಣ್ಣಿನಲ್ಲಿ ಅರ್ಧಂಭರ್ದ ಹೂತು ಹಾಕಲಾಗಿತ್ತು.

ಮುನಿವೆಂಕಟಪ್ಪ ಎಂಬುವವರು ಎಂದಿನಂತೆ ಗ್ರಾಮದ ಹೊರವಲಯದಲ್ಲಿ ವಾಯ ವಿಹಾರ ಮಾಡುತ್ತಿದ್ದಾಗ ತಾತ್ಯಪ್ಪನವರ ತೋಟದಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿ ಅತ್ತ ಧಾವಿಸಿದಾಗ ನವಜಾತು ಶಿಶುವನ್ನು ಮಣ್ಣಿನಲ್ಲಿ ಅರ್ಧಂಬರ್ಧ ಹೂತು ಹಾಕಿರುವುದು ಗೋಚರಿಸಿದೆ. ಕೂಡಲೇ ಈ ವಿಷಯವನ್ನು ಆಶಾ ಕಾರ್ಯಕರ್ತೆ ರಾಧಮ್ಮ ಅವರ ಗಮನಕ್ಕೆ ತಂದಾಗ, ಗ್ರಾಮದ ಇತರೆ ಮಹಿಳೆಯರೊಂದಿಗೆ ಅರ್ಧಂಬರ್ಧ ಮಣ್ಣಿನಲ್ಲಿ ಜೀವಂತವಾಗಿ ಹೂತಿಡಲಾಗಿದ್ದ ಮಗುವನ್ನು ಹೊರತೆಗೆದಿದ್ದಾರೆ.   ನವಜಾತ ಮಗುವನ್ನು ಹೊಟ್ಟೆ ಭಾಗದಿಂದ ತಾಯಿಗೆ ಸಂಪರ್ಕವಿರುವ ಕರುಳು ಸಮೇತ ಹೂಳಲಾಗಿದ್ದು, ತಕ್ಷಣ ಕರುಳನ್ನು ಕತ್ತರಿಸಿ ಕುರುಬೂರು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಅವರು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಹಾರೈಕೆ ಮಾಡಿ ಅರೋಗ್ಯವಂತವಾಗಿರುವ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.  ವಿಷಯ ತಿಳಿದ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ರಮೇಶ್, ಬಾಲ ನ್ಯಾಯಮಂಡಳಿ ಸದಸ್ಯ ಎನ್. ಹರಿಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವೆಂಕಟ ನಾರಾಯಣಮ್ಮ, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯಾ, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಬೈರಪ್ಪ, ಪಿಎಸ್‍ಐ ಜಗದೀಶ್‍ರೆಡ್ಡಿ ಮತ್ತಿತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin