ಹೆದ್ದಾರಿಗಳಲ್ಲಿ ಸಂಭವಿಸುವ ಶೇ.40ರಷ್ಟು ಅಪಘಾತಗಳಿಗೆ ಮದ್ಯಪಾನವೇ ಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

Accident-02
ಬೆಂಗಳೂರು,ಡಿ.28- ರಾಜ್ಯದ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಶೇ.40ರಷ್ಟು ಮದ್ಯ ಸೇವಿಸಿ ಚಾಲನೆ ಮಾಡುವುದರಿಂದಲೇ ಆಗುತ್ತಿವೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.  ರಾಜ್ಯ ರಸ್ತೆ ಸುರಕ್ಷತಾ ಪ್ರಾಕಾರ ಹೆದ್ದಾರಿಗಳಲ್ಲಿ ಸಂಭವವಿರುವ ಅಪಘಾತಗಳು ಹಾಗೂ ಅದಕ್ಕೆ ಕಾರಣಗಳ ಬಗ್ಗೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಅಪಘಾತಗಳು ಹೆದ್ದಾರಿಗಳಲ್ಲಿ ಸಂಭವಿಸಿದ್ದು, ಅದರಲ್ಲಿ ಶೇ.40ರಷ್ಟು ಮದ್ಯ ಸೇವಿಸಿ ಚಾಲನೆ ಮಾಡಿದ್ದರಿಂದಲೇ ಆಗಿವೆ ಎಂಬುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.

Accident-01ಹೆದ್ದಾರಿಗಳ ಪಕ್ಕದ ರಸ್ತೆಗಳಲ್ಲೇ ಮದ್ಯದಂಗಡಿಗಳು ಹಾಗೂ ಡಾಬಾಗಳು ನಾಯಿ ಕೊಡೆಗಳಂತೆ ತಲೆಯೆತ್ತಿವೆ. ಡಾಬಾಗಳಲ್ಲಿ ಊಟದ ಜತೆಗೆ ಮದ್ಯ ಪೂರೈಕೆ ಮಾಡುವುದರಿಂದ ವಾಹನ ಚಾಲಕರಿಗೆ ಸುಲಭವಾಗಿ ಮದ್ಯ ಸಿಗುತ್ತದೆ. ಹೊರ ರಾಜ್ಯಗಳಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜ್ಯ ಪ್ರವೇಶಿಸುವ ಸರಕು ಹೊತ್ತ ವಾಹನ ಚಾಲಕರಿಗೆ ಹಾಗೂ ಪ್ರವಾಸ ತೆರಳುವವರಿಗೆ ಸುಲಭವಾಗಿ ಹೆದ್ದಾರಿ ಬದಿಯಲ್ಲಿ ಮದ್ಯ ದೊರೆಯುತ್ತದೆ. ಮದ್ಯ ಸೇವನೆ ನಂತರ ಚಾಲಕರು ವೇಗ ಮತ್ತು ರಭಸವಾಗಿ ಚಾಲನೆ ಮಾಡಿ ನಿಯಂತ್ರಣ ತಪ್ಪುವುದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದೂ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಪೊಲೀಸ್ ಇಲಾಖೆಯ ಅಂಕಿ-ಅಂಶದ ಪ್ರಕಾರ, ರಾಜ್ಯದಲ್ಲಿ 2015ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 5,659 ಜನ ಮೃತಪಟ್ಟಿದ್ದು, ಈ ಪೈಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ 1,823 ಹಾಗೂ ರಾಜ್ಯ ಹೆದ್ದಾರಿಯಲ್ಲಿ 1,639 ಮಂದಿ ಮೃತಪಟ್ಟಿದ್ದಾರೆ. 2016 ಜೂನ್‍ವರೆಗೆ ಹೆದ್ದಾರಿ ಅಪಘಾತಗಳಲ್ಲಿ 5,858 ಮಂದಿ ಮೃತಪಟ್ಟಿದ್ದು, ಇದರಲ್ಲಿ 2,192 ಮಂದಿ ರಾಷ್ಟ್ರೀಯ ಹೆದ್ದಾರಿ ಹಾಗೂ 1,530 ಮಂದಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ.  ಸುಪ್ರೀಂಕೋರ್ಟ್ ತೀರ್ಪಿನಿಂದ ಮುಂಬರುವ ದಿನಗಳಲ್ಲಿ ಅಪಘಾತ ಇಳಿಯಬಹುದು ಎಂದು ಪೊಲೀಸ್ ಅಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin