ಹೆರಿಟೇಜ್ ವೈನರಿಯಿಂದ ರಿಯಾಯ್ತಿ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

Girls

ಬೆಂಗಳೂರು, ಆ.31- ಇದೇ ಮೊದಲ ಬಾರಿಗೆ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಾಗರೀಕರಿಗೆ ವೈನ್ ಬಗ್ಗೆ ಪರಿಚಯಿಸುವ ಕುರಿತಂತೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೆರಿಟೇಜ್ ವೈನರಿ ಹೆಸರಿನ ಈ ಕಾರ್ಯಕ್ರಮದಲ್ಲಿ ಮೈಸೂರಿಗರಿಗೆ ಶೇ.50ರಷ್ಟು ರಿಯಾಯ್ತಿಯಲ್ಲಿ ರುಚಿಕರ ವೈನ್ನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆರಿಟೇಜ್ ವೈನರಿ ವ್ಯವಸ್ಥಾಪಕ ಪಿ.ಎಲ್.ವೆಂಕಟರಾಮರೆಡ್ಡಿ , ಕಳೆದ 5 ವರ್ಷದಲ್ಲಿ, ಇಲ್ಲಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನಿಸಿದರೆ ಇದು ಸಾಬೀತಾಗುತ್ತದೆ. ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ವೈನ್ ಪ್ರಿಯರು ಹೆರಿಟೇಜ್ ವೈನರಿಗೆ ಭೇಟಿ ನೀಡಿದ್ದು, ಐದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆದಿರುವ ದೇಶದ ಹಾಗೂ ರಾಜ್ಯದ ಮೊದಲ ವೈನರಿ ಎಂಬ ಹೆಗ್ಗಳಿಕೆಯನ್ನೂ ತಂದು ಕೊಟ್ಟಿದೆ ಎಂದರು.

ರಾಜ್ಯದ ಬೆಂಗಳೂರು, ಗ್ರಾಮಾಂತರ ಪ್ರದೇಶಗಳಾದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯುವ ನೀಲಿ ದ್ರಾಕ್ಷಿಯನ್ನು ಬಳಸಿಕೊಂಡು ವೈನ್ ತಯಾರಿಕೆಯನ್ನು ಪ್ರಾರಂಭಿಸಿದ ಹೆರಿಟೇಜ್ ವೈನರಿಯ ವ್ಯಾಪಕ ಸಂಶೋಧನೆಯ ಫಲವಾಗಿ ಇಂದು ಹಲವಾರು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೆ, ಫ್ರೆಂಚ್ ದ್ರಾಕ್ಷಿಯನ್ನು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟೇಬಲ್ ವೈನ್ಗಳನ್ನು ತಯಾರಿಸುತ್ತಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin