ಹೆಲಿಕಾಫ್ಟರ್ ವೀಕ್ಷಿಸಲು ಹೋಗಿ ಕೈ ಕಳೆದುಕೊಂಡ ಬಾಲಕಿ

ಈ ಸುದ್ದಿಯನ್ನು ಶೇರ್ ಮಾಡಿ

Helicaptor-01

ಮೈಸೂರು, ಅ.7- ಮಹಡಿ ಮೇಲೆ ನಿಂತು ಕಾತುರದಿಂದ ಹೆಲಿಕಾಫ್ಟರ್ ವೀಕ್ಷಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬಾಲಕಿಯೊಬ್ಬಳು ಬಲಗೈ ಕಳೆದುಕೊಂಡ ಘಟನೆ ಪಡುವಾರಹಳ್ಳಿಯಲ್ಲಿ ನಡೆದಿದೆ.ಹೆಲಿಕಾಫ್ಟರ್ ನೋಡುವ ಕುತೂಹಲದಿಂದ ಪಡುವಾರಹಳ್ಳಿ ನಿವಾಸಿ ಅರುಣ್ ಹಾಗೂ ಇಂದಿರಾ ದಂಪತಿ ಪುತ್ರಿ ಮೇಘನಾ ಮನೆಯ ಮಹಡಿ ಮೇಲೆ ತೆರಳಿದ್ದು, ಹೆಲಿಕಾಫ್ಟರ್ ವೀಕ್ಷಣೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ಹಿಡಿದಿದ್ದಾಳೆ.ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಆಕೆಯ ಒಂದು ಕೈ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಜಯಲಕ್ಷ್ಮಿಪುರಂನ ಸೆಂಟ್‍ಜೋಸೆಫ್ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿರುವ ಮೇಘನಾಳನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin