ಹೆಲ್ಮೆಟ್,ಇನ್ಷೂರೆನ್ಸ್ ರಹಿತ ದ್ವಿಚಕ್ರ ವಾಹನ ಚಾಲನೆ ಮಾಡುವವರ ವಿರುದ್ದ ಕಠಿಣ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

traffic -police

ಮೈಸೂರು,ಫೆ.28-ನಗರದಲ್ಲಿ ಹೆಲ್ಮೆಟ್ ಹಾಗೂ ಇನ್ಷೂರೆನ್ಸ್ ರಹಿತ ದ್ವಿಚಕ್ರ ವಾಹನ ಚಾಲನೆ ಮಾಡುವವರ ವಿರುದ್ದ ಸಂಚಾರಿ ಪೊಲೀಸರು ಸ್ಥಳದಲ್ಲೇ ಕಠಿಣ ಕ್ರಮ ಕೈಗೊಂಡರು. ಕಳೆದ ಎರಡು ದಿನಗಳ ಹಿಂದೆ ಸಂಚಾರಿ ಪೊಲೀಸರು ನಗರಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಮನವಿ ಮಾಡಿದ್ದರು. ಆದರೂ ಕೂಡ ಕೆಲವರು ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ್ದರಿಂದ ಸ್ಥಳದಲ್ಲೇ ಅವರನ್ನು ತಡೆದು ಹೆಲ್ಮೆಟ್ ಖರೀದಿಸಿ ಸ್ಥಳದಲ್ಲೇ ಧರಿಸಲು ಸೂಚಿಸಿ, ದಂಡ ಪಾವತಿಸುವಂತೆ ಕ್ರಮ ಕೈಗೊಂಡರು.

ತಮ್ಮ ವಾಹನದ ಇನ್ಷೂರೆನ್ಸ್ ಇಲ್ಲದವರು ಸ್ಥಳದಲ್ಲೇ ಏಜೆನ್ಸಿಗಳ ಮೂಲಕ ಇನ್ಷೂರೆನ್ಸ್ಮಾಡಿಸಿಕೊಡಲಾಯಿತು. ದೇವರಾಜ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 387 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 46,100 ರೂ. ದಂಡ ವಸೂಲಿ ಮಾಡಿದರು. ಎನ್.ಆರ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 700 ಪ್ರಕರಣಗಳು ದಾಖಲಾಗಿದ್ದು ,35 ಸಾವಿರ ದಂಡ ಸಂಗ್ರಹಿಸಿದ್ದಾರೆ. ಪೊಲೀಸರ ಈ ಕ್ರಮದಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಖರೀದಿಸಲು ಹಾಗೂ ಇನ್ಷೂರೆನ್ಸ್ ಮಾಡಿಸಲು ಮುಂದಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin