ಹೆಲ್ಮೆಟ್‍ಗಳನ್ನು ನೀಡಿ ಜನ್ಮದಿನ ಆಚರಿಸಿಕೊಂಡ ಇನ್‍ಸ್ಪೆಕ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

mysure

ಮೈಸೂರು,ಮಾ.18-ಹಲವರು ತಮ್ಮ ಜನ್ಮದಿನವನ್ನು ದುಂದುವೆಚ್ಚ ಮಾಡುವ ಮೂಲಕ ಆಚರಿಸಿಕೊಂಡರೆ ನಗರದ ಇನ್‍ಸ್ಪೆಕ್ಟರೊಬ್ಬರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‍ಗಳನ್ನು ನೀಡಿ ವಿಶೇಷ ರೀತಿ ಆಚರಿಸಿಕೊಳ್ಳುವ ಮೂಲಕ ಜನರ ಗಮನ ಸೆಳೆದರು.ಸಿದ್ದಾರ್ಥ ಸಂಚಾರಿ ಠಾಣೆ ಇನ್‍ಸ್ಪೆಕ್ಟರ್ ಹರೀಶ್‍ಕುಮಾರ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಐಎಸ್‍ಐ ಗುರುತಿನ ಹೆಲ್ಮೆಟ್‍ಗಳನ್ನು ಉಚಿತವಾಗಿ ವಿವರಿಸಿದರು. ಸುಮಾರು 50ಕ್ಕೂ ಹೆಚ್ಚು ಜನರಿಗೆ ಹೆಲ್ಮೆಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನವಶ್ಯಕವಾಗಿ ದುಂದುವೆಚ್ಚ ಮಾಡಿ ಜನ್ಮದಿನ ಆಚರಿಸುವ ಬದಲು ನಾಲ್ಕು ಮಂದಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕೆಂದರು.

ಹಲವಾರು ದ್ವಿಚಕ್ರ ವಾಹನ ಸವಾರರು 50-100 ರೂ. ನೀಡಿ ಕಳಪೆ ಮಟ್ಟದ ಹೆಲ್ಮೆಟ್ ಧರಿಸುತ್ತಾರೆ. ಇದರಿಂದಾಗಿ ಅಪಘಾತ ಸಂಭವಿಸಿದಾಗ ತಲೆಗೆ ಹೆಚ್ಚು ಪೆಟ್ಟು ಬೀಳುವ ಸಾಧ್ಯತೆಯಿದೆ. ಹಾಗಾಗಿ ಉತ್ತಮ ಗುಣಮಟ್ಟದ ಐಎಸ್‍ಐ ಗುರುತಿನ ಹೆಲ್ಮೆಟ್ ಧರಿಸಬೇಕೆಂದು ಅವರು ತಿಳಿಸಿದರು. ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಇದೇ ವೇಳೆ ಅವರು ಅರಿವು ಮೂಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin