ಹೆಲ್ಮೆಟ್ ಕಡ್ಡಾಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

KADURU

ಕಡೂರು, ಫೆ.3-ಸಾರ್ವಜನಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಕಡೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪಥಸಂಚಲನ ನಡೆಸಿದರು.ನಂತರ ಬಸವೇಶ್ವರ ವೃತ್ತದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಕುರಿತು ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಮಾತನಾಡಿ ಈ ತಿಂಗಳು ಅಪರಾಧ ಮಾಸಾಚರಣೆ ತಿಂಗಳಾಗಿದ್ದು, ಅಪಘಾತಗಳನ್ನು ತಡೆಯಲು ಪ್ರತಿ ಮನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮನೆಯಿಂದ ಹೊರಡುವ ಮುನ್ನ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ವಾಹನ ಚಾಲನೆಯಲ್ಲಿ ಮದ್ಯಪಾನ ಮಾಡಬಾರದು ಹಾಗೂ ವಾಹನ ಚಾಲನೆಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ ಇರಬೇಕೆಂಬುದನ್ನು ತಿಳಿಹೇಳಬೇಕಿದೆ ಎಂದರು.ಕಡೂರು ಪೊಲೀಸ್ ಠಾಣಾಧಿಕಾರಿ ರಾಕೇಶ್, ಸಿಬ್ಬಂದಿಗಳಾದ ರವಿ, ಸುರೇಶ್, ಗಿರೀಶ್, ಜಗದೀಶ್, ಅಂಜನಪ್ಪ, ನವೀನ್, ಶ್ರೀನಿವಾಸ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin