ಹೇಮಂತ್ ನಿಂಬಾಳ್ಕರ್ ವಿರುದ್ಧ ಸೂಕ್ತ ತನಿಖೆಗೆ ಅಗ್ನಿ ಶ್ರೀಧರ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Agni-Sridhar

ಬೆಂಗಳೂರು, ಮಾ.27- ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿರುವ ಬೆಂಗಳೂರು ನಗರ ಹೆಚ್ಚುವರಿ ಪೆÇಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಹಾಗೂ ರಾಜ್ಯ ಪೆÇಲೀಸ್ ಮಹಾ ನಿರ್ದೇಶಕರಲ್ಲಿ ಮನವಿ ಮಾಡಿರುವುದಾಗಿ ಲೇಖಕ, ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಅಗ್ನಿ ಶ್ರೀಧರ್ ತಿಳಿಸಿದರು.  ಕಾಣದ ಕೈಗಳು ಪಿತೂರಿ ನಡೆಸಿ ನನ್ನ ಮನೆ ಮೇಲೆ ದಾಳಿ ನಡೆಸುವಂತೆ ಮಾಡಿದ್ದು ಈ ಬಗ್ಗೆ ಒಂದು ವಾರದೊಳಗೆ ಸರ್ಕಾರ ಸಿಒಡಿ ತನಿಖೆಗೆ ಆದೇಶಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಲ್ಲದೆ ಸಂಘಟನೆಗಳೊಂದಿಗೆ ಸೇರಿ ಹೋರಾಟಕ್ಕಿಳಿಯುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ್ ಹೇಳಿದರು.

ನಮ್ಮ ಕನ್ನಡ ಸೇನೆಯ ಪದಾಧಿಕಾರಿಯಾದ ರೋಹಿತ್ ಶೋಧಕ್ಕಾಗಿ ಇಸ್ರೋ ಲೇಔಟ್‍ನ ಪ್ರಶಾಂತಿ ನಗರದ ತಮ್ಮ ನಿವಾಸಕ್ಕೆ ಕಳೆದ ಫೆ.8ರಂದು ಬೆಳಿಗ್ಗೆ 10.15ರಲ್ಲಿ ಬಂದ ಹೇಮಂತ್ ನಿಂಬಾಳ್ಕರ್ ತಮ್ಮೊಂದಿಗೆ ದರ್ಪದಿಂದ ವರ್ತಿಸಿದರು. ಅವರ ವರ್ತನೆಗೆ ನಾನು ಆಕ್ಷೇಪ ವ್ಯಕ್ತಪಡಿಸಿದಾಗ, ಕ್ರಿಮಿನಲ್‍ಗಳಿಗೆ ಆಶ್ರಯ ನೀಡಿ ಉತ್ತರ ಭಾರತದ ಸುಪಾರಿ ಹಂತಕರೊಂದಿಗೆ ನೀನು ಸಂಪರ್ಕ ಹೊಂದಿರುವೆ ಎಂದು ಕೂಗಾಡಿ ಸುಳ್ಳು ಆರೋಪಗಳನ್ನು ಮಾಡಿದರು. ಉತ್ತರ ಭಾರತದ ಯುವಕರು ನನ್ನ ಅಂಗರಕ್ಷಕರಷ್ಟೇ. ಪೊಲೀಸ್ ಆಯುಕ್ತರ ಪೂರ್ವಾನು ಮತಿ ಪಡೆದ ನಂತರವೇ ನಾನು ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರೂ ನಿಂಬಾಳ್ಕರ್ ನನ್ನ ಮೇಲೆ ದೌರ್ಜನ್ಯ ಎಸಗಿದರು ತಮಗೆ ಕಪಾಳಮೋಕ್ಷ ಮಾಡಲು ಪೊಲೀಸ್ ಇನ್ಸ್‍ಪೆಕ್ಟರ್ ಒಬ್ಬರಿಗೆ ಪ್ರಚೋದಿಸಿದರು ಎಂದು ಶ್ರೀಧರ್ ಆರೋಪಿಸಿದರು.

ನಂತರ ನನ್ನ ಮತ್ತು ಇತರರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡರು. ಬಳಿಕ ನ್ಯಾಯಾಲಯದ ಜಾಮೀನಿನ ಮೇಲೆ ನಾವೆಲ್ಲ ಬಿಡುಗಡೆ ಯಾದೆವು ಎಂದು ತಿಳಿಸಿರುವ ಅವರು, ಈ ಪ್ರಕರಣದ ಎಫ್‍ಐಆರ್ ಮತ್ತು ಅಂಗರಕ್ಷಕರನ್ನು ಇಟ್ಟುಕೊಳ್ಳಲು ಪೊಲೀಸ್ ಆಯುಕ್ತರು ನೀಡಿರುವ ಅಧಿಕೃತ ಪತ್ರವನ್ನು ಡಿಜಿಪಿ ಅವಗಾಹನೆಗಾಗಿ ಸಲ್ಲಿಸಿರುವುದಾಗಿ ಹೇಳಿದರು. ಹೇಮಂತ್ ನಿಂಬಾಳ್ಕರ್ ಅವರು ನನ್ನ ಮನೆಗೆ ಬರುವುದಕ್ಕೆ ಮುನ್ನ ದಾಳಿ ನಡೆಸುವುದಾಗಿ ದೃಶ್ಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ನಾನು ಅನೇಕ ಪುಸ್ತಕಗಳನ್ನು ಬರೆದಿದ್ದೇನೆ. ಎರಡು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ನಾನು ನಿರ್ದೇಶಿಸಿದ ತಮಸ್ಸು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಐದು ಚಿತ್ರಗಳಿಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದೇನೆ. ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯಿಂದ ಮೂರು ಪ್ರಶಸ್ತಿಗಳು ಬಂದಿವೆ ಎಂದು ಶ್ರೀಧರ್ ಹೇಳಿದರು.  1998ರಲ್ಲಿ ಅಗ್ನಿ ವಾರ ಪತ್ರಿಕೆ ಆರಂಭಿಸಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಹೋರಾಡುತ್ತಾ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿದ್ದೇನೆ. ಅಲ್ಲದೇ ಕರುನಾಡ ಸೇನೆ, ನ್ಯಾಯಕ್ಕಾಗಿ ನಾನು ಮತ್ತು ಹಿಂದುಸ್ತಾನ ಸೂಫಿ ಚಳವಳಿ ಎಂಬ ಮೂರು ಸಂಘಟನೆಗಳಿಗೆ ನಾನು ಮುಖ್ಯಸ್ಥನಾಗಿದ್ದೇನೆ. ಕಾವೇರಿ ನದಿ ವಿವಾದದಲ್ಲಿ ಕನ್ನಡಿಗರು ಮತ್ತು ತಮಿಳು ಜನರ ಸೌಹಾರ್ದತೆಗಾಗಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದ್ದೇನೆ ಎಂದು ಅವರು ತಮ್ಮ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಿಂಬಾಳ್ಕರ್ ಅವರ ವರ್ತನೆಯಿಂದ ನನಗೆ ತುಂಬಾ ಘಾಸಿಯಾಗಿದೆ. ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿರುವ ಅವರ ವಿರುದ್ಧ ಸೂಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಅವರು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin