ಹೈಕಮಾಂಡ್ ನಿರ್ಧಾರವನ್ನು ಇನ್ನೂ ಕಾದು ನೋಡ್ತೀನಿ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01
ಬೆಂಗಳೂರು, ಮೇ 23- ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದರಿಂದ ತಮಗೆ ಅಸಮಾಧಾನವಾಗಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಿರ್ಧಾರವನ್ನು ಕಾದು ನೋಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಹೈಕಮಾಂಡ್ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಿರುವುದರಿಂದ ತಮಗೇನು ಅಸಮಾಧಾನವಿಲ್ಲ. ನಾವು ಅಧಿಕಾರಕ್ಕಾಗಿ ಕಾದು ಕೂತಿಲ್ಲ ಎಂದರು. ಇಂದು ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಈ ವಿಚಾರದಲ್ಲಿ ವಿರೋಧವಿಲ್ಲ.

ಎಂಟು ವರ್ಷದಿಂದ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದಾರೆ. ಹಲವಾರು ಬಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ನೀಡಿಲ್ಲ. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಅಧ್ಯಕ್ಷರಾಗಲು ಬಹಳಷ್ಟುಮಂದಿ ಕಾದಿದ್ದಾರೆ. ಆದರೆ, ನಾನು ಕಾದು ಕುಳಿತಿಲ್ಲ. ಕಾಯುತ್ತಾ ಕುಳಿತುಕೊಳ್ಳುವ ವ್ಯಕ್ತಿತ್ವವೂ ನನ್ನದಲ್ಲ ಎಂದರು. ರಾಜಕಾರಣಕ್ಕೆ ಬಂದಿದ್ದು ಸನ್ಯಾಸತ್ವ ತೆಗೆದುಕೊಳ್ಳಲು ಅಲ್ಲ. ನಾವು ರಾಜಕಾರಣ ಮಾಡಲಿಕ್ಕಾಗಿಯೇ ಬಂದಿದ್ದೇವೆ. ಹೈಕಮಾಂಡ್ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin