ಹೈಟಿ ಮೇಲೆ ಬಂದೆರಗಿದ ವಿನಾಶಕಾರಿ ಮ್ಯಾಥ್ಯೂ ಚಂಡಮಾರುತಕ್ಕೆ 300ಕ್ಕೂ ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Mathew-7

ಲೆಸ್ ಕಯೆಸ್, ಅ.7-ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿ ಮೇಲೆ ಬಂದೆರಗಿದ ವಿನಾಶಕಾರಿ ಮ್ಯಾಥ್ಯೂ ಚಂಡಮಾರುತಕ್ಕೆ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಅನೇಕ ದ್ವೀಪ ಪಟ್ಟಣಗಳು, ಪ್ರವಾಸಿತಾಣಗಳು ಮತ್ತು ಮೀನುಗಾರಿಕೆ ಗ್ರಾಮಗಳು ನಾಮಾವಶೇಷವಾಗಿವೆ. ಕಳೆದ ಐದು ದಶಕಗಳಲ್ಲಿ ಕಂಡು ಕೇಳರಿಯದ ದೈತ ಚಂಡಮಾರುತದ ರೌದ್ರಾವತಾರದಿಂದ ಹೈಟಿ ತತ್ತರಗೊಂಡಿದೆ.  ಹೈಟಿ ಮೇಲೆ ಗಂಟೆಗೆ 230 ಕಿ.ಮೀ.ವೇಗದಲ್ಲಿ ಅಪ್ಪಳಿಸಿದ ಚಂಡಮಾರುತದ ಪ್ರಕೋಪಕ್ಕೆ 300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಪ್ರಕೃತಿ ವಿಕೋಪದ ಆರ್ಭಟಕ್ಕೆ ಮನೆಗಳು, ಸೇತುವೆಗಳು ಕೊಚ್ಚಿ ಹೋಗಿವೆ.

Mathew-9

ಮರಗಳು ಉರುಳಿ, ರಭಸವಾಗಿ ಅಪ್ಪಳಿಸಿದ ಭಗ್ನಾವಶೇಷಗಳಿಂದ ಹಾಗೂ ಭೋರ್ಗರೆಯುತ್ತಿರುವ ನದಿಗಳ ಪ್ರವಾಹದಿಂದಾಗಿ ಹೆಚ್ಚಾಗಿ ಸಾವು ಸಂಭವಿಸಿವೆ. ಈ ದುರಂತದಲ್ಲಿ ಅನೇಕರು ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಗಳು ಮತ್ತು ಮೇಯರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೆರಿಬಿಯನ್ ರಾಷ್ಟ್ರದ ಚಂಡಮಾರುತಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಟಿಬುರೊನ್ ದ್ವೀಪಕಲ್ಪದ ಲೆಸ್ ಅಂಗ್ಲಾಯಿಸ್, ರೋಚೆ-ಔ-ಬಟಿಯು, ಪೋರ್ಟ್-ಔ-ಪಿಮೆಂಟ್ ಈ ಪ್ರದೇಶಗಳಲ್ಲಿ ಅತಿಹೆಚ್ಚು ಸಾವು-ನೋವು ಮತ್ತು ಹಾನಿ ಸಂಭವಿಸಿದೆ.

Mathew-8

ತುರ್ತುಪರಿಸ್ಥಿತಿ ಘೋಷಣೆ :

ಹೈಟಿಯಲ್ಲಿ ರುದ್ರನರ್ತನದ ನಂತರ ಅಮೆರಿಕದ ಫ್ಲೋರಿಡಾ  ಮೇಲೂ ಮ್ಯಾಥ್ಯೂ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಬಿರುಗಾಳಿಯೊಂದಿಗೆ ಅಬ್ಬರದ ಮಳೆ ಸುರಿಯುತ್ತಿದೆ. ಈಶಾನ್ಯ ಭಾಗದಲ್ಲಿರುವ ಸುಮಾರು 2 ಲಕ್ಷ ಜನರನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.  ಚಂಡಮಾರುತದ ಆತಂಕದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಫ್ಲೋರಿಡಾ ದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

Mathew-6

Mathew-5

Mathew-4

Mathew-3

Mathew-1

Firing-02

Mathew-10

► Follow us on –  Facebook / Twitter  / Google+

Facebook Comments

Sri Raghav

Admin