ಹೈದರಾಬಾದ್ ನಲ್ಲಿ ಅಶ್ಲೀಲ ಮತ್ತು ಭಯಾನಕ ಹಿಂಸಾಚಾರ ದೃಶ್ಯಗಳನ್ನು ವೀಕ್ಷಿಸುತ್ತಿದ್ದ 65 ಬಾಲಕರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Arrested-01
ಹೈದರಾಬಾದ್,ಡಿ.15- ಮುತ್ತಿನನಗರಿ ಹೈದರಾಬಾದ್‍ನ ಇಂಟರ್‍ನೆಟ್ ಕೆಫೆಗಳು ಮತ್ತು ಸೈಬರ್ ಸೆಂಟರ್‍ಗಳ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು, ಅಶ್ಲೀಲ ಮತ್ತು ಭಯಾನಕ ಹಿಂಸಾಚಾರ ದೃಶ್ಯಗಳನ್ನು ವೀಕ್ಷಿಸುತ್ತಿದ್ದ ಮಕ್ಕಳನ್ನು ಮತ್ತು ಕೆಫೆ ಮಾಲೀಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಹೈದರಾಬಾದ್‍ನ ವಿವಿಧ ಇಂಟರ್‍ನೆಟ್ ಕೆಫೆಗಳಲ್ಲಿ ವೀಡಿಯೋಗೇಮ್ ಸೋಗಿನಲ್ಲಿ ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರಗಳು ಮತ್ತು ಹಿಂಸಾಚಾರದ ದೃಶ್ಯಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ದೂರುಗಳು ಇತ್ತೀಚೆಗೆ ವ್ಯಾಪಕವಾಗಿ ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಹೈದರಾಬಾದ್ ಪೊಲೀಸರು (ಸೈಬರ್ ವಿಭಾಗ) ವಿವಿಧೆಡೆ ದಾಳಿ ನಡೆಸಿದರು.

ದಾಳಿ ವೇಳೆ 65ಕ್ಕೂ ಹೆಚ್ಚು ಮಕ್ಕಳು ಪೋರ್ನ್ ಚಿತ್ರಗಳನ್ನು ಹಾಗೂ ಐಎಸ್ ಭಯೋತ್ಪಾದರು ಮುಗ್ಧರ ತಲೆಗಳನ್ನು ಕತ್ತರಿಸುವಂಥ ಭೀಬತ್ಸ ದೃಶ್ಯಗಳನ್ನು ವೀಕ್ಷಿಸಿತ್ತಿದ್ದರು. ಇವರೆಲ್ಲರೂ 14 ವರ್ಷ ಒಳಗಿನ ಮಕ್ಕಳು.  ಮಕ್ಕಳು ಮತ್ತು ಇಂಟರ್‍ನೆಟ್ ಕೆಫೆ ಮಾಲೀಕರನ್ನು ವಶಕ್ಕೆ ಪಡೆದ ಪೊಲೀಸರು ಹೈದರಾಬಾದ್‍ನ ಹಳೆ ನಗರದ ಪೊಲೀಸ್ ಕಟ್ಟಡಕ್ಕೆ ಕರೆದೊಯ್ದರು. ನಂತರ ಮಾಧ್ಯಮದವರನ್ನು ಕರೆಸಿ ಅವರ ಮುಂದೆ ಮಕ್ಕಳ ಪರೇಡ್ ನಡೆಸಿದರು.  ಬಳಿಕ ಉಪ ಪೊಲೀಸ್ ಆಯುಕ್ತ (ದಕ್ಷಿಣ ವಲಯ) ವಿ.ಸತ್ಯನಾರಾಯಣ ಪೋಷಕರು ಮತ್ತು ಪಾಲಕರನ್ನು ಅಲ್ಲಿಗೆ ಕರೆಸಿದರು. ಹದ್ದುಬಸ್ತಿನಲ್ಲಿಡದ ಪೋಷಕರನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಆಪ್ತ ಸಮಾಲೋಚನೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿದರು.  ಬಂಧಿತ ಇಂಟರ್‍ನೆಟ್ ಮತ್ತು ಸೈಬರ್ ಕೆಫೆ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin