ಹೈದರಾಬಾದ್ ನಲ್ಲಿ 7 ಅಂತಸ್ತಿನ ಕಟ್ಟಡ ಕುಸಿದು ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Building-Collapse

ಹೈದರಾಬಾದ್, ಡಿ.9-ಏಳು ಅಂತಸ್ತಿನ ಕಟ್ಟಡವೊಂದು ಕುಸಿತು ಕನಿಷ್ಠ ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಹೈದರಾಬಾದ್‍ನಲ್ಲಿ ಸಂಭವಿಸಿದೆ. ಕಟ್ಟಡದ ಭಗ್ನಾವಶೇಷಗಳಡಿ ಸಿಲುಕಿರುವ ಸುಮಾರು 10 ಜನ ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.  ಹೈದರಾಬಾದ್‍ನ ನಾನಕ್‍ರಾಮ್‍ಗುಡದಲ್ಲಿ ನಿನ್ನೆ ರಾತ್ರಿ ಸತ್ಯನಾರಾಯಣ ಎಂಬುವರಿಗೆ ಸೇರಿದ ಏಳು ಮಹಡಿಗಳ ಕಟ್ಟಡ ಕುಸಿದು ಬಿತ್ತು. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತ ಸಂಭವಿಸಿದಾಗ ಕಟ್ಟಡದಲ್ಲಿ ನಿರ್ಮಾಣ ಕಾರ್ಮಿಕರ ಐದು ಕುಟುಂಬಗಳಿದ್ದವು. ಕಟ್ಟಡ ಕುಸಿದು ಬಿದ್ದ ನಂತರ ಒಬ್ಬ ಮಹಿಳೆ ಮತ್ತು ಮಗುವನ್ನು ರಕ್ಷಿಸಲಾಗಿದೆ.

ಕಟ್ಟಡದ ಅವಶೇಷಗಳ ಕೆಳಗೆ ಸಿಲುಕಿರುವ ಸುಮಾರು 10 ಮಂದಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ಮುಂದುವರಿಸಿದೆ.
ಕಾರ್ಮಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ದೆಹಲಿ ಪ್ರವಾಸದಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸಚಿವರು ಮತ್ತು ಉನ್ನತಾಧಿಕಾರಿಗಳಿಗ ಸೂಚನೆ ನೀಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin