ಹೈದರಾಬಾದ್ : ಭೀಕರ ಅಪಘಾತದಲ್ಲಿ 8 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Hysdarabad

ಹೈದರಾಬಾದ್,ಆ.31- ನಗರದ ಹೊರವಲಯದ ಮೆಡ್ಚಲನ್ ಟೋಲ್ಗೇಟ್ ಬಳಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಮೊದಲು ಕಾರು ಡಿಕ್ಕಿ ಹೊಡೆಯಿತು. ನಂತರ ವೇಗವಾಗಿ ಬರುತ್ತಿದ್ದ ಇನ್ನೊಂದು ಲಾರಿ, ಹಿಂದಿನಿಂದ ರಭಸವಾಗಿ ಕಾರಿಗೆ ಅಪ್ಪಳಿಸಿತು. ಬಳಿಕ ಈ ಎರಡು ಲಾರಿಗಳ ಮಧ್ಯೆ ಕಾರು ಸಿಕ್ಕಿಕೊಂಡಿತು. ಈ ದುರಂತದಲ್ಲಿ ಕಾರಿನಲ್ಲಿದ್ದ ಎಂಟು ಮಂದಿ ಮೃತಪಟ್ಟರು ಎಂದು ಮೆಡ್ಚಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಜಶೇಖರ್ ರೆಡ್ಡಿ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರೆಲ್ಲರೂ ತೆಲಂಗಾಣದ ಮೆಡಕ್ ಜಿಲ್ಲೆಯ ಸದಾಶಿವಪೇಟ್ ನಿವಾಸಿಗಳಾಗಿದ್ದು, 20ರಿಂದ 30 ವರ್ಷಗಳ ಪ್ರಾಯದವರು. ಕೋಮ್ಪಲ್ಲಿಯಲ್ಲಿನ ಒಂದು ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin