ಹೈಸ್ಪೀಡ್ ಬುಲೆಟ್ ಟ್ರೈನ್’ನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ,ನ.12-ಜಪಾನ್ ಸಹಯೋಗದಲ್ಲಿ ಮಹತ್ವಾಕಾಂಕ್ಷಿ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಾಣ 2018ರಿಂದ ಆರಂಭವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಮೋದಿ ಜಪಾನ್ ಪ್ರಧಾನಿ ಸಿಂಜೋ ಅಬೆ ಅವರೊಂದಿಗೆ ಜಗದ್ವಿಖ್ಯಾತ ಶಿನ್‍ಕಾನ್‍ಸೇನ್ ಹೈ ಸ್ಪೀಡ್ ರೈಲಿನಲ್ಲಿ ಟೋಕಿಯೋದಿಂದ ಕೋಬ್ ನಗರಕ್ಕೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಾಣವನ್ನು ಜಪಾನ್ ಸಹಯೋಗದಲ್ಲಿ ಆರಂಭಿಸಲಾಗುವುದು. 2023ರ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ ಎಂದು ಮೋದಿ ಹೇಳಿದರು.

ಜಪಾನ್‍ನಿಂದ 250 ಕಿ.ಮೀ ನಗರದಲ್ಲಿರುವ ಕೋಬ್ ನಗರದ ಶಿನ್‍ಕಾನ್‍ಸೇನ್ ರೈಲು ತಯಾರಿಕ ಘಟಕ ವೀಕ್ಷಣೆಗೆ ಬುಲೆಟ್ ಟ್ರೈನ್‍ನಲ್ಲಿ ತೆರಳಿದ ಪ್ರಧಾನಿ ಮಾರ್ಗಮಧ್ಯದಲ್ಲಿ ಹಿಮಾವೃತ ಮೌಂಟ್ ಫ್ಯುಜಿ ಪರ್ವತದ ನಯನ ಮನೋಹರ ದೃಶ್ಯವನ್ನು ನೋಡಿ ಪುಳಕಗೊಂಡರು. ಮಾರ್ಗದುದ್ದಕ್ಕೂ ಜಪಾನ್ ಪ್ರಧಾನಿಯವರೊಂದಿಗೆ ಬುಲೆಟ್ ಟ್ರೈನ್ ಮತ್ತು ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ವಿಷಯ ಕುರಿತು ಮೋದಿ ಚರ್ಚಿಸಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಮೋದಿ ಮತ್ತು ಅಬೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಹತ್ವಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆ, ಅದರ ವಿನ್ಯಾಸ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

12modi1

► Follow us on –  Facebook / Twitter  / Google+

Facebook Comments

Sri Raghav

Admin