ಹೊಟೇಲ್ ಉದ್ಯಮಿ ಮನೆಯಲ್ಲಿ 1.25 ಕೆಜಿ ಚಿನ್ನಾಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

Theft

ಬೆಂಗಳೂರು, ಡಿ.28- ಹೊಟೇಲ್ ಉದ್ಯಮಿ ಕುಟುಂಬದವರೆಲ್ಲ ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳ್ಳರು ಮನೆಯ ಹಿಂಬಾಗಿಲನ್ನು ತೆರೆದು ಒಳನುಗ್ಗಿ 3 ಲಕ್ಷ ಹಣ ಹಾಗೂ 1.25 ಕೆಜಿ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಶಂಕರಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಂಧಿಬಜಾರ್‍ನ ರಂಗರಾವ್ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಹೊಟೇಲ್ ಉದ್ಯಮಿ ವಿನಾಯಕ ಎಂಬುವವರ ಮನೆಯಿದ್ದು ಕುಟುಂಬದವರೆಲ್ಲ ರಾತ್ರಿ 9.30ರಲ್ಲಿಆರ್ ‍ಪಿಸಿ ಲೇಔಟ್‍ನ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಹಿಂಬಾಗಿಲ ಚಿಲಕವನ್ನು ಕಿಟಕಿ ಮೂಲಕ ಕೈ ತೂರಿಸಿ ತೆಗೆದು ಒಳನುಗ್ಗಿದ್ದಾರೆ. ಬೀರುವನ್ನು ಮೀಟಿ ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ 1.25 ಕೆಜಿ ತೂಕದ ಚಿನ್ನಾಭರಣ , 3 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ರಾತ್ರಿ 11.30ರಲ್ಲಿ ವಿನಾಯಕ ಕುಟುಂಬ ಮನೆ ವಾಪಸ್ಸಾದಾಗ ಎಂದಿನಂತೆ ಮುಂಬಾಗಿಲು ಬೀಗ ತೆರೆದು ಒಳಗೆ ಹೋದಾಗ ಹಿಂಬಾಗಿಲು ತೆರೆದಿರುವುದನ್ನು ಕಂಡು ಗಾಬರಿಯಾಗಿ ಬೀರುವನ್ನು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಶಂಕರಪುರ ಠಾಣೆ ಪೊಲೀಸರಿಗೆ ತಿಳಿಸಿದ್ದು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin