ಹೊತ್ತಿ ಉರಿದ 2 ಕಾರು-ಟಾಟಾಏಸ್ ವಾಹನ

ಈ ಸುದ್ದಿಯನ್ನು ಶೇರ್ ಮಾಡಿ

Car-Fire--01

ಬೆಳಗಾವಿ, ನ.3-ನಗರದ ಜನತೆಯನ್ನು ಕೆಲ ಕಾಲ ಆತಂಕಕ್ಕೀಡು ಮಾಡಿದ್ದ ಘಟನೆಯೊಂದು ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಳೇ ಗಾಂಧಿನಗರದ ರಸ್ತೆ ಬದಿ ನಿಲ್ಲಿಸಲಾಗಿದ್ದ ಟಾಟಾಏಸ್ ವಾಹನ ಹಾಗೂ ಎರಡು ಕಾರುಗಳು ನಿಲ್ಲಿಸಿದ್ದ ಜಾಗದಲ್ಲಿ ಕಸಕ್ಕೆ ಹಾಕಿದ್ದ ಬೆಂಕಿ ಕಾರಿಗೆ ತಾಗಿ ಇದರ ಕಿಡಿ ಅಲ್ಲಿದ್ದ ವಾಹನಗಳಿಗೂ ಆವರಿಸಿದ ಪರಿಣಾಮ ಈ ಘಟನೆ ನಡೆದಿದೆ.

ಬೆಳ್ಳಂಬೆಳಗ್ಗೆ ಈ ಅವಘಡಿದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಅವಘಡ ಸಂಭವಿಸಿದ ಕೆಲವೇ ಅಂತರದಲ್ಲಿ ಗ್ಯಾಸ್ ಬಂಕ್ ಇದ್ದುದರಿಂದ ಗಾಂಧಿನಗರ ಜನ ಭಯಭೀತರಾಗಿದ್ದರು.  ಸ್ಥಳೀಯರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಸ್ಥಳಕ್ಕೆ ಬೇಗ ಆಗಮಿಸಲಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.

Facebook Comments

Sri Raghav

Admin