ಹೊರಗೆ ಮಸಾಜ್ ಪಾರ್ಲರ್, ಒಳಗೆ ಹೈಟೆಕ್ ವೇಶ್ಯಾವಾಟಿಕೆ

ಈ ಸುದ್ದಿಯನ್ನು ಶೇರ್ ಮಾಡಿ

prosti

ಬೆಂಗಳೂರು,ಆ.11- ಮಸಾಜ್ ಪಾರ್ಲರ್ ಸೋಗಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಒಬ್ಬ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾಸಿಯಾ (44), ಚಿತ್ರದುರ್ಗದ ಮಹೇಶ್ವರಪ್ಪ (38), ಹಿಮಾಯಿತ್ ಉಲ್ಲಾ (39), ರಾಣೇಶ್‍ರಾಯ್ (32) ಮತ್ತು ತಮಿಳುನಾಡಿನ ವೈದೀಶ್ವರನ್ (32) ಬಂಧಿತ ಆರೋಪಿಗಳು.
ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅರೋಮಾ  ಸ್ಪಾ ಅಂಡ್ ಸಲೂನ್ ಎಂಬ ಮಸಾಜ್ ಪಾರ್ಲರ್ ಹೆಸರಿನಲ್ಲಿ ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್ ಮತ್ತು ಸ್ಯಾಂಡ್‍ವಿಚ್ ಎಂಬ ಹೈಟೆಕ್ ಲೈಂಗಿಕ ಚಟುವಟಿಕೆಗಳನ್ನು ನಡೆಸುತ್ತಾ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸಿದರು.

ಆರೋಪಿಗಳಿಂದ 9 ಮೊಬೈಲ್ ಫೋನ್‍ಗಳು, 20,250 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.  ಮುನೀಂದ್ರಕುಮಾರ್ ಎಂಬಾತ  ಈ ಮಸಾಜ್  ಪಾರ್ಲರ್‍ನ ಮಾಲೀಕನಾಗಿದ್ದು , ಉದ್ಯೋಗ ಅರಸಿ ಬಂದ ಈ ಯುವತಿಯರನ್ನು ಆರೋಪಿಗಳು ಪುಸಲಾಯಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.  ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮುನೀಂದ್ರಕುಮಾರ್, ಸಿಂಗಾರವೇಲು ಮತ್ತು ರವಿ ಎಂಬುವವರಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin