ಹೊಲಿಗೆ ಯಂತ್ರ, ಲ್ಯಾಪಟಾಪ್, ಗ್ಯಾಸ್ ಒಲೆ ಉಚಿತ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

muddebihala

ಮುದ್ದೇಬಿಹಾಳ,ಮಾ.28- ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಒಲೆ, ಲ್ಯಾಪಟಾಪ್, ಸೋಲಾರ್ ವಿದ್ಯುತ ದೀಪ, ಹೊಲಿಗೆ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ಪಟ್ಟಣದ ಪುರಸಭೈಯಲ್ಲಿ ವಿತರಿಸಲಾಯಿತು.ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೈ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಫಲಾನುಭವಿಗಳಿಗೆ ಉಚಿತ ಸಾಮಗ್ರಿ ವಿತರಿಸಲಾಯಿತು.ಪುರಸಭೈ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ ಶಾಸಕ ಸಿ.ಎಸ್. ನಾಡಗೌಡ ಅವರ ನಿರ್ದೇಶನದಂತೆ ಅಧಿಕಾರ ನಡೆಸಿದ್ದು ಈಗಾಗಲೇ 14 ಕೋಟಿ ರೂ. ವೆಚ್ಚದಲ್ಲಿ ವಾರದ ಏಳು ದಿನ ನಿತ್ಯ ನೀರು ಒದಗಿಸುವ ಯೋಜನೆಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 7.5 ಕೋಟಿ ರೂ ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು ಅದನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶರಣು ಬೂದಿಹಾಳಮಠ, ಸಿಬ್ಬಂದಿ ರಮೇಶ ಮಾಡಬಾಳ ಮಾತನಾಡಿ, ಉಚಿತವಾಗಿ ಎಸ್‍ಸಿ ಹಾಗೂ ಸಾಮಾನ್ಯ ವರ್ಗದವರಿಗೆ 140 ಗ್ಯಾಸ್ ಒಲೆ, 12 ಹೊಲಿಗೆ ಯಂತ್ರ, 1.72 ಲಕ್ಷ ರೂ.ಗಳು ವೈದ್ಯಕೀಯ ವೆಚ್ಚ, ಎಸ್‍ಸಿ ವರ್ಗದ 6 ಜನರಿಗೆ ಉಚಿತ ಲ್ಯಾಪಟಾಪ್, ಎಸ್‍ಟಿ ವರ್ಗದ 42 ಫಲಾನುಭವಿಗಳಿಗೆ ಸೋಲಾರ್ ವಿದ್ಯುತ್ ದೀಪ ವಿತರಣೆ ಮಾಡಲಾಯಿತು ಎಂದರು.ಪುರಸಭೈ ಸದಸ್ಯರಾದ ಮಹಿಬೂಬ ಗೊಳಸಂಗಿ, ಎಚ್.ಬಿ. ಸಾಲಿಮನಿ, ಮನೋಹರ ತುಪ್ಪದ, ರಾಜಶೇಖರ ಹೊನ್ನುಟಗಿ, ರಾಮು ಲಮಾಣಿ, ಶಹಜಾದವಿ ಹುಣಸಗಿ, ಹಣಮಂತ ವಡ್ಡರ, ಬಸವರಾಜ ಮುರಾಳ, ಗೋಪಿ ಮಡಿವಾಳರ, ಸಾಹೇಬಲಾಲ ಬಾವೂರ, ಕೃಷ್ಣಾ ಪವಾರ, ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ, ಪವಾಡೆಪ್ಪ ಬಿರಾದಾರ, ಶಿವು ಶಿವಪುರ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin