ಹೊಸತಡಕಿನ ಎಫೆಕ್ಟ್ : ಬಿಬಿಎಂಪಿ ಸಭೆ ಖಾಲಿ…ಖಾಲಿ…
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು,ಮಾ.30-ನಿನ್ನೆಯಷ್ಟೆ ವರ್ಷದ ಮೊದಲನೆ ಹಬ್ಬ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇಂದು ಹೊಸತಡಕು. ಇದರ ಎಫೆಕ್ಟ್ ಬಿಬಿಎಂಪಿ ಸಭೆಯಲ್ಲೂ ಎದ್ದು ಕಾಣುತ್ತಿತ್ತು. ಬಿಬಿಎಂಪಿ ಬಜೆಟ್ ಮೇಲಿನ ಚರ್ಚೆಗೆ ಸಭೆ ನಡೆಯುತ್ತಿದ್ದು , ಇಂದು ಕೌನ್ಸಿಲ್ನಲ್ಲಿ ಕೇವಲ ಬೆರಳೆಣಿಕೆಯಷ್ಟು ಸದಸ್ಯರು ಪಾಲ್ಗೊಂಡಿದ್ದರು. ಡೀ ಹಾಲ್ನಲ್ಲಿದ್ದ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಆನಂದ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ , ಆಡಳಿತ ಪಕ್ಷದ ನಾಯಕ ಮೊಹಮ್ಮದ್ ರಿಜ್ವಾನ್ ಹಾಜರಾಗಿದ್ದರು. ಸಭೆಯ ಮುಂಭಾಗದ ಚೇರುಗಳಲ್ಲಿ ಬೆರಳೆಣಿಕೆ ಸದಸ್ಯರು ಕಾಣಿಸಿದರೆ ಇಡೀ ಸಭಾಂಗಣದಲ್ಲಿ ಖಾಲಿ ಚೇರುಗಳು ಬಣಗುಡುತ್ತಿದ್ದವು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments