ಹೊಸಹೊಳಲು ದೊಡ್ಡಕೆರೆಗೆ ನೀರು ತುಂಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

kr--pete

ಕೆ.ಆರ್.ಪೇಟೆ, ಸೆ.1- ತಾಲೂಕಿನ ಹೊಸಹೊಳಲು ದೊಡ್ಡಕೆರೆಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಈ ಭಾಗದ ನೂರಾರು ರೈತರು ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕೆರೆಯ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವ ವ್ಯಾಪ್ತಿಯ ಹೊಸಹೊಳಲು, ಜಿ.ಜಿ.ಕೊಪ್ಪಲು, ಚೌಡೇನಹಳ್ಳಿ, ಚಾಮಿಕೊಪ್ಪಲು, ಯಡಹಳ್ಳಿ, ಮತ್ತಿಘಟ್ಟ, ನಾರ್ಗೋನಹಳ್ಳಿ, ಮತ್ತಿತರರ ಗ್ರಾಮಗಳ ಮುಖಂಡರಾದ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಎನ್.ಟಿ.ನಾಗರಾಜು, ರಾಮೇಗೌಡ, ಚಿಕ್ಕೇಗೌಡ, ಕುಮಾರ್, ಹೆಚ್.ಎಸ್.ಮಂಜುನಾಥ್, ಹೆಚ್.ಎಸ್.ನಾಗರಾಜು, ಎನ್.ಪ್ರಕಾಶ್, ಗುಡ್ಡೇನಹಳ್ಳಿ ಜಿ.ಕೆ.ಪ್ರದೀಪ್, ಪಾಂಡುರಂಗೇಗೌಡ, ರಮೇಶ್, ಹೊಸಹೊಳಲು ಕೃಷ್ಣ ಮತ್ತಿತರರ ನೇತೃತ್ವದಲ್ಲಿ ಪಟ್ಟಣದ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.

ಅಧಿಕಾರಿಗಳು ತಾಲೂಕಿನ ರೈತರಿಗೆ ಮೋಸ ಮಾಡಿ ನಾಗಮಂಗಲ, ಪಾಂಡವಪುರ, ಮಂಡ್ಯ ತಾಲೂಕುಗಳ ಕೆರೆ-ಕಟ್ಟೆಗಳನ್ನು ತುಂಬಿಸುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ನೀರು ಹರಿಯುತ್ತಿದ್ದರೂ ತಾಲೂಕಿನ ಕೆರೆ-ಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ. ಅಧಿಕಾರಿಗಳ ಮಲತಾಯಿ ಧೋರಣೆಯನ್ನು ಬದಲಾಯಿಸಿಕೊಂಡು ಹೊಸಹೊಳಲು ಕೆರೆ ನೀರು ತುಂಬಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಒಂದೆರಡು ದಿನಗಳಲ್ಲಿ ನೀರು ಹರಿಸುವ ಕಾರ್ಯ ಆರಂಭಿಸದೆ ಇದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin