ಹೊಸ ಕ್ರಾಂತಿಗೆ ಮುಂದಾದ ಎಂಎಸ್‍ಐಎಲ್, ಪ್ರತಿ ಟನ್ ಮರಳಿನ ಬೆಲೆ ಎಷ್ಟು ಗೊತ್ತೇ ..!

ಈ ಸುದ್ದಿಯನ್ನು ಶೇರ್ ಮಾಡಿ

Sand-MSIL-01
ಬೆಂಗಳೂರು,ಜ.20- ರಾಜ್ಯದಲ್ಲಿ ಎದುರಾಗಿರುವ ಮರಳು ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಹೊಸ ಕ್ರಾಂತಿಕಾರಿ ಹೆಜ್ಜೆಗೆ ಮುಂದಾಗಿದೆ. ಮಲೇಷ್ಯಾದಿಂದ ಆಮದು ಮಾಡಿಕೊಂಡ ಮರಳನ್ನು ಭಾರತೀಯ ಗುಣಮಟ್ಟ (ಐಎಸ್‍ಓ) ಮಾನ್ಯತೆಯೊಂದಿಗೆ ಗ್ರಾಹಕರಿಗೆ 50 ಕೆಜಿ ತೂಕದಲ್ಲಿ ಸಿಮೆಂಟ್ ಬ್ಯಾಗ್‍ಗಳ ಮಾದರಿಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲು ಮುಹೂರ್ತ ನಿಗದಿಪಡಿಸಿದೆ. ಪ್ರತಿ ಟನ್ ಮರಳು ನಾಲ್ಕು ಸಾವಿರ ರೂಗಳಂತೆ ಎಂಎಸ್‍ಐಎಲ್ ತನ್ನ ಮಾರಾಟ ಕೇಂದ್ರಗಳ ಮೂಲಕವೇ ಗ್ರಾಹಕರಿಗೆ ತಲುಪಿಸಲು ನಿರ್ಧರಿಸಿದೆ.

ಇಡೀ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಯೋಜನೆಯನ್ನು ಆರಂಭಸಿಲಾಗಿದ್ದು, ವಾರ್ಷಿಕ 50 ಲಕ್ಷ ಟನ್ ಮರಳು ಅವಶ್ಯಕತೆ ನಿರೀಕ್ಷಿಸಲಾಗಿದೆ ಎಂದು ಎಂಎಸ್‍ಐಎಲ್‍ನ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್ ಈ ಸಂಜೆಗೆ ತಿಳಿಸಿದ್ದಾರೆ. ಬೆಂಗಳೂರು, ಬೆಂ.ಗ್ರಾಮಾಂತರ, ತುಮಕೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪ್ರಾರಂಭಿಕ ಹಂತದಲ್ಲಿ ಮರಳು ಮಾರಾಟ ಆರಂಭಿಸಲಾಗುತ್ತಿದೆ. ತಿಂಗಳಾಂತ್ಯಕ್ಕೆ ರಾಜಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ರಸ್ತೆಯ ಬಿಡದಿಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದ್ದು, ಮಲೇಷ್ಯಾದಲ್ಲಿ ಮರಳನ್ನು ಹಡಗಿಗೆ ತುಂಬಿವ ಸಂದರ್ಭದಲ್ಲಿ ನಂತರ ಅದು ಭಾರತದ ಬಂದರಿಗೆ ಬಂದು ಟ್ರಕ್‍ಗಳಿಗೆ ಲೋಡ್ ಆಗಿ ಬಂದು ಪ್ಯಾಕ್ ಆಗುವವರೆಗೂ ಅದರ ಗುಣಮಟ್ಟವನ್ನು ಪರೀಕ್ಷಿಸಲು ವಿಶೇಷ ತಂಡವನ್ನೇ ರಚಿಸಲಾಗಿದೆ.
ನಂತರ ಡಂಪಿಂಗ್ ಯಾರ್ಡ್‍ಗೆ ಬಂದು ಪ್ಯಾಕ್ ಆಗುವವರೆಗೂ ಎಲ್ಲ ರೀತಿಯ ಮುತುವರ್ಜಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸರ್ಕಾರದಿಂದ ಯಾವುದೇ ಅನುದಾನವನ್ನು ಬಳಸಿಕೊಳ್ಳದೆ ನೇರವಾಗಿ ಎಂಎಸ್‍ಐಎಲ್ ವ್ಯವಹಾರಿಕ ವಹಿವಾಟನ್ನು ಹೊಂದಿದೆ. ಅಂದಾಜು ಮಾಡುವುದಾದರೆ ಒಂದು ಟ್ರಕ್ 10 ಟನ್‍ವರೆಗು ಮರಳು ತುಂಬಬಹುದು ಅದಕ್ಕೆ 40 ಸಾವಿರ ವೆಚ್ಚ ತಗಲುತ್ತದೆ. ಹೊಸ ವರ್ಷದಲ್ಲಿ ಜನತೆಗೆ ಹೊಸ ಗಿಫ್ಟ್ ನೀಡುವ ನಿಟ್ಟಿನಲ್ಲಿ ಎಂಎಸ್‍ಐಎಲ್ ತನ್ನ ಕಾರ್ಯವನ್ನು ರೂಪಿಸಿದೆ ಎಂದು ಅವರು ವಿವರಿಸಿದ್ದಾರೆ.

Facebook Comments

Sri Raghav

Admin