ಹೊಸ ನೋಟುಗಳನ್ನು ಡ್ರಾ ಮಾಡಿಕೊಂಡು ಬಂದಿದ್ದ ಒಬ್ಬಂಟಿ ವೃದ್ಧೆಯ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

2000-Notes

ಚನ್ನಪಟ್ಟಣ, ಡಿ.20- ಬ್ಯಾಂಕಿನಿಂದ ಹೊಸ ನೊಟು ಡ್ರಾ ಮಾಡಿಕೊಂಡು ಬಂದಿದ್ದ ಒಬ್ಬಂಟಿ ವೃದ್ಧೆ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತೆಂಗಿನಗರಿ ಎಣೆದು ಮಾರಾಟ ಮಾಡುತ್ತಿದ್ದ ವೃದ್ಧೆ ತನ್ನ ಬಳಿ ಇದ್ದ 50ಸಾವಿರಕ್ಕೂ ಹೆಚ್ಚು ಹಳೇ ನೋಟನ್ನು ತಮ್ಮ ಬ್ಯಾಂಕ್‍ಗೆ ಖಾತೆಗೆ ಜಮಾ ಮಾಡಿದ್ದರು.ಇತ್ತೀಚೆಗೆ ಬ್ಯಾಂಕ್‍ನಿಂದ ಹೊಸ ನೋಟನ್ನು ಡ್ರಾ ಮಾಡಿಕೊಂಡು ಬಂದಿದ್ದ ಹಣವನ್ನು ಲಪಟಾಯಿಸುವ ಉದ್ದೇಶದಿಂದ ವೃದ್ಧೆಯನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಮೃತ ವೃದ್ಧೆಯ ಸೊಂಟ ಭಾಗದ ಸೀರೆಯಲ್ಲಿ ಸುತ್ತಿಟ್ಟುಕೊಂಡಿದ್ದ 20 ಸಾವಿರ ಹೊಸ ನೋಟು ಹಾಗೆ ಇತ್ತು ಎನ್ನಲಾಗಿದೆ.

ವೃದ್ಧೆ ಹಣ ಡ್ರಾ ಮಾಡಿಕೊಂಡು ಬಂದ ಮರು ದಿನವೇ ತನ್ನ ಎಂಚಿನ ಮನೆಯಲ್ಲಿ ಪಂಚೆಯಿಂದ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಳು. ವಿಷಯ ತಿಳಿದು ಬೆಂಗಳೂರಿನಲ್ಲಿದ್ದ ಇವರ ಮಲ ಮಗ ಊರಿಗೆ ಬಂದು ಏಕಾಏಕಿ ಶವ ಸಂಸ್ಕಾರ ನಡೆಸಿದ್ದಾನೆ.ಆದರೆ, ವೃದ್ಧೆಯ ಬಳಿ ಇದ್ದ ಹಣ ಲಪಟಾಯಿಸಲು ಬಂದವರು ಆಕೆಯ ಕತ್ತು ಇಸುಕಿ ಕೊಲೆ ಮಾಡಿ ಪಂಚೆಯಿಂದ ನೇಣು ಬಿಗಿದು ಹಣಕ್ಕಾಗಿ ಮನೆಯೆಲ್ಲಾ ಜಾಲಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವೃದ್ಧೆಯ ಸೊಂಟದಲ್ಲಿದ್ದ ಹಣ ಭದ್ರವಾಗಿದ್ದರೂ ಹಣಕ್ಕಾಗಿ ವೃದ್ಧೆ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾಯಿತು. ಹೀಗಾಗಿ ಪೊಲೀಸರು ಪ್ರಕರಣಕ್ಕೆ ಮರು ಜೀವ ನೀಡಿ ಅಮಾಯಕ ವೃದ್ಧೆಯ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin