ಹೊಸ ವರ್ಷಕ್ಕೆ ಪುನೀತ್ ಗೆ ಆಕ್ಷನ್ ಕಟ್ ಹೇಳ್ತಾರಂತೆ ಹರ್ಷ

ಈ ಸುದ್ದಿಯನ್ನು ಶೇರ್ ಮಾಡಿ

Harsha
ಮುಕುಂದ ಮುರಾರಿ ಚಿತ್ರದ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್. ಕುಮಾರ್ ಮತ್ತು ಜಯಶ್ರೀದೇವಿ ಜಂಟಿ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಆರಂಭವಾಗುತ್ತಿದೆ. ಈ ಚಿತ್ರ 2017ರ ಜನವರಿ ತಿಂಗಳಲ್ಲಿ ಆರಂಭವಾಗಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕರಾಗಿದ್ದಾರೆ. ಇನ್ನೂ ಚಿತ್ರದ ಶೀರ್ಷಿಕೆ, ತಾರಾಗಣ, ತಾಂತ್ರಿಕ ವರ್ಗ ಆಯ್ಕೆ ಪ್ರಕ್ರಿಯೆ ಯಲ್ಲಿದೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಎಂದೇ ಹೆಸರಾಗಿರುವ ಎ.ಹರ್ಷ ನಿರ್ದೇಶಿಸಲಿದ್ದಾರೆ.ನೃತ್ಯ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದ ಎ.ಹರ್ಷ ಗೆಳೆಯ ಚಿತ್ರದ ಮೂಲಕ ಸಿನಿಮಾ ನಿರ್ದೇಶನವನ್ನೂ ಆರಂಭಿಸಿ ನಂತರ ಬಿರುಗಾಳಿ, ಚಿಂಗಾರಿ, ಭಜರಂಗಿ, ವಜ್ರಕಾಯ ಮತ್ತು ಜೈ ಮಾರುತಿ 800 ಚಿತ್ರಗಳೊಂದಿಗೆ ಒಂದರ ಹಿಂದೆ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದವರು. ಪ್ರಜ್ವಲ್ ದೇವರಾಜ್, ಚೇತನ್, ದರ್ಶನ್, ಶಿವರಾಜ್

ಕುಮಾರ್ ಮತ್ತು ಶರಣ್ ಸೇರಿದಂತೆ ಸರದಿಯಲ್ಲಿ ದೊಡ್ಡ ಹೀರೋಗಳ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬಂದ ಹರ್ಷ ಅವರಿಗೆ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಚಿತ್ರವೊಂದನ್ನು ನಿರ್ದೇಶಿಸಬೇಕು ಎನ್ನುವುದು ಬಹು ಕಾಲದ ಕನಸಾಗಿತ್ತು. ಅದು ಎಂ.ಎನ್. ಕುಮಾರ್ ಮತ್ತು ಜಯಶ್ರೀ ದೇವಿ ಎಂಬ ಇಬ್ಬರು ದಿಗ್ಗಜರೆನಿಸಿದ ನಿರ್ಮಾಪಕರ ಜಂಟಿ ನಿರ್ಮಾಣದಲ್ಲಿ ಸಾಕಾರಗೊಳ್ಳುತ್ತಿದೆ.ಈಗ ಎಂ.ಎನ್.ಕುಮಾರ್, ಜಯಶ್ರೀ ದೇವಿ, ನಿರ್ದೇಶಕ ಎ.ಹರ್ಷ ಮತ್ತು ಪುನೀತ್ ರಾಜ್‍ಕುಮಾರ್ ಒಳಗೊಂಡಂತೆ ದೊಡ್ಡ ಮಟ್ಟದ ಗೆಲುವನ್ನು ಕಂಡ ಎಲ್ಲರೂ ಒಂದೆಡೆ ಸೇರಿದ್ದಾರೆ. ಈ ನಾಲ್ಕು ಜನರ ಕಾಂಬಿನೇಷನ್‍ನಲ್ಲಿ ನಿರ್ಮಾಣವಾಗುತ್ತಿರುವ ಬಹು ಕೋಟಿ ವೆಚ್ಚದ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮಹತ್ತರವಾದ ಇತಿಹಾಸ ಸೃಷ್ಟಿಸುವುದು ಖಚಿತ ಎನ್ನುವಂತಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin