ಹೊಸ ವರ್ಷಕ್ಕೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಭಾರೀ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Vala-CM-Siddaramaiah--02

ಬೆಂಗಳೂರು, ಡಿ.23-ಲಿಂಗಾಯಿತ-ವೀರಶೈವ ಸಮುದಾಯ ಒಡೆದಾಡಿ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರ್ಷಾಂತ್ಯಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಭಾರೀ ಶಾಕ್ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಎರಡನೇ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಭಾರೀ ಹುಮ್ಮಸ್ಸಿನಿಂದ ಪ್ರವಾಸ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಸ ವರ್ಷಕ್ಕೆ ರಾಜ್ಯಪಾಲರು ಭರ್ಜರಿ ಶಾಕ್ ನೀಡಲು ಸದ್ದಿಲ್ಲದೆ ಮುಂದಾಗಿದ್ದಾರೆ.

ಬೆಂಗಳೂರಿನ ಭೂಪಸಂದ್ರ, ಡಿನೋಟಿಫಿಕೇಷನ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಿ ರಾಜ್ಯ ಬಿಜೆಪಿ ನಾಯಕರು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ನೀಡಿದ್ದ ದೂರನ್ನು ಅವರು ಗಂಭೀರವಾಗಿ ಪರಿಗಣಿಸಿದ್ದು , ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ.  ಮೂರ್ನಾಲ್ಕು ದಿನದಲ್ಲಿ ಕಾನೂನು ತಜ್ಞರು ನೀಡುವ ಅಭಿಪ್ರಾಯದ ನಂತರ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಬೇಕೆ ಇಲ್ಲವೆ ಎಂಬುದನ್ನು ತೀರ್ಮಾನಿಸಲಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ದ ಅನುಮತಿ ನೀಡಿದರೆ ಸಿದ್ದರಾಮಯ್ಯ ಭಾರೀ ಗಂಡಾಂತರಕ್ಕೆ ಸಿಲುಕುವುದರಲ್ಲಿ ಸಂದೇಹವೇ ಇಲ್ಲ.  ಒಂದು ವೇಳೆ ಪ್ರಾಸಿಕ್ಯೂಷನ್‍ಗೆ ವಾಲಾ ಎಸ್ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂತರ ಭೂಚಕ್ರಕ್ಕೆ ಸಿಲುಕಿದ ಎರಡನೇ ಸಿಎಂ ಎಂಬ ಕುಖ್ಯಾತಿಗೆ ಸಿದ್ದರಾಮಯ್ಯ ಸಿಲುಕುತ್ತಾರೆ.   ಈ ಹಿಂದೆ ವಕೀಲರಾದ ಸಿರಾಜುದ್ದೀನ್ ಪಾಷ ಹಾಗೂ ಬಾಲರಾಜ್ ಎಂಬುವರು ಯಡಿಯೂರಪ್ಪನವರ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಬೇಕೆಂದು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ದೂರು ನೀಡಿದ್ದರು.  ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ನಡೆಸಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿತ್ತು.

ಅಂತಿಮವಾಗಿ ಕಾನೂನು ತಜ್ಞರ ಸಲಹೆ ಪಡೆದು ಖುದ್ದು ವಕೀಲರಾಗಿದ್ದ ಭಾರದ್ವಾಜ್ ಅವರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದರು. ಇದರ ಪರಿಣಾಮ ಬಿಎಸ್‍ವೈ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳಬೇಕಾಯಿತಲ್ಲದೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಯಿತು.

ಮರುಕಳಿಸುವುದೇ ಇತಿಹಾಸ:

ಬಿಜೆಪಿಯ ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಕೆಲವು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.
ಆರ್‍ಎಂವಿ 2 ನೇ ಹಂತದ ಬಡಾವಣೆಗೆ ಭೂಪಸಂದ್ರದಲ್ಲಿ 1978 ರಲ್ಲಿ ಭೂಸ್ವಾಧೀನ ಕೈಗೊಳ್ಳಲಾಗಿತ್ತು. ಬಳಿಕ ನಿವೇಶನ ಹಂಚಿಕೆಯಾಗಿತ್ತು.ಇದರ ಮಧ್ಯೆ ಭೂಸ್ವಾಧೀನ ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು.  ಹೈಕೋರ್ಟ್‍ನಲ್ಲಿ ನಿವೇಶನದಾರರ ಪರತೀರ್ಪು ಬಂದಿತ್ತು. ನಂತರ ಸುಪ್ರೀಂಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು.ಅದಾದ ಬಳಿಕ ಜಯಲಕ್ಷ್ಮಮ್ಮ ಎಂಬುವರು ಪ್ರಾಥಮಿಕ ಅಧಿಸೂಚನೆ ಪ್ರಶ್ನಿಸಿ 2015 ರ ನವೆಂಬರ್‍ನಲ್ಲಿ ಹೈಕೋರ್ಟ್ ಏಕಸದಸ್ಯ ಪೀಠದ ಮೊರೆ ಹೋಗಿದ್ದರು.

ಅದಕ್ಕೂ ಮೊದಲುಕೀರ್ತಿರಾಜ್ ಶೆಟ್ಟಿಎಂಬುವರಿಗೆ ಭೂಮಿಯಜಿಪಿಎ ನೀಡಲಾಗಿತ್ತು. ಇದರ ವಿಚಾರಣೆ ಕೈಗೊಂಡಏಕಸದಸ್ಯ ಪೀಠವು 2016 ರ ಫೆಬ್ರವರಿಯಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಅಸಿಂಧುಗೊಳಿಸಿತ್ತು. ಆರ್‍ಎಂವಿ 2ನೇ ಹಂತದ ಬಡಾವಣೆಗೆ ಬೆಂಗಳೂರು ಉತ್ತರತಾಲೂಕಿನ ಭೂಪಸಂದ್ರದ ಸರ್ವೆ ನಂಬರ್ 20, 21ರಲ್ಲಿನ ಅಧಿಸೂಚಿತ 6.36 ಎಕರೆಯನ್ನು ಕೈಬಿಡಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಕೆಲ ತಿಂಗಳ ಹಿಂದೆ ಗಂಭೀರ ಆರೋಪ ಮಾಡಿದ್ದರು. ನಂತರ ಈ ಆಪಾದನೆಯನ್ನು ಸಿಎಂ ತಳ್ಳಿಹಾಕಿದ್ದರು. ಪುನಃ ಈ ಪ್ರಕರಣಕೆದಕಿರುವ ಪುಟ್ಟಸ್ವಾಮಿಅವರು ಪಕ್ಷದ ಶಾಸಕರಾದ ಅರವಿಂದ ಲಿಂಬಾವಳಿ, ಡಾ.ಸಿ.ಎನ್ ಅಶ್ವತ್ಥನಾರಾಯಣ, ಎಲ್.ಎ. ರವಿಸುಬ್ರಹ್ಮಣ್ಯ ಅವರೊಂದಿಗೆ ಬುಧವಾರರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಭೂಪಸಂದ್ರ ಡಿನೋಟಿಫೈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿರುವ ಅನುಮಾನವಿದೆ. ಜತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವಕೆ.ಜೆ. ಜಾರ್ಜ್, ನಗರಾಭಿವೃದ್ಧಿಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರಜೈನ್ ಕೈವಾಡವೂ ಇದೆ ಎಂಬುದು ಬಿಜೆಪಿ ಆರೋಪ.
ಹಾಗಾಗಿ ಸಿಎಂ, ಜಾರ್ಜ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವಂತೆರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.  ರಾಜ್ಯಾದಂತ ಪ್ರವಾಸ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಹಾಗೂ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ. ಪದೇ ಪದೇ ಬಿಎಸ್‍ವೈ ಜೈಲಿಗೆ ಹೋಗಿಬಂದವರು ಎಂದು ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಇದರಿಂದ ಮುಜಗರಕ್ಕೆ ಒಳಗಾಗಿರುವ ಬಿಜೆಪಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ನೈತಿಕವಾಗಿ ಅವರನ್ನು ಕಟ್ಟಿ ಹಾಕಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ. ವಿ.ಆರ್.ವಾಲಾ ಅವರು ಕರ್ನಾಟಕದ ರಾಜ್ಯಪಾಲರಾದ ಮೇಲೆ ಬಿಜೆಪಿಯೊಂದಿಗಿನ ಅವರ ಸಂಬಂಧ ಅಷ್ಟಕಷ್ಟಕ್ಕೆ ಎಂಬಂತಿತ್ತು.
ಬೇರೊಂದು ರಾಜ್ಯಕ್ಕೆ ನಿಯೋಜನೆಗೊಳ್ಳುವ ಉಮೇದಿನಲ್ಲಿರುವ ವಾಲಾ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ವಿರುದ್ದ ಅಸ್ತ್ರ ಬಿಟ್ಟರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Facebook Comments

Sri Raghav

Admin