ಹೊಸ ವರ್ಷದ ನಶೆಯಲ್ಲಿ ಕಿರಿಕ್ ಮಾಡೀರಿ ಹುಷಾರ್ ..!

ಈ ಸುದ್ದಿಯನ್ನು ಶೇರ್ ಮಾಡಿ

New-YEar--013

ಬೆಂಗಳೂರು, ಡಿ.31-ಯುವಕರೇ…ನೂತನ ವರ್ಷಾಚರಣೆ ವೇಳೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತೀಸೀರಿ ಜೋಕೆ…! ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಜಾಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಅಲ್ಲಲ್ಲೇ ಸಿಸಿಟಿವಿ ಕಣ್ಗಾವಲು ಹಾಕಿದ್ದಾರೆ. ಒಂದು ವೇಳೆ ಮಹಿಳೆಯರು, ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದರೆ ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಇರಿ. ಯಾವುದೇ ಕಾರಣಕ್ಕೂ ಯುವತಿಯರನ್ನು ಚುಡಾಯಿಸಬೇಡಿ.  ರಾತ್ರಿಯಿಡೀ ನಗರ ಜಾಲೀಸ್ ಆಯುಕ್ತರಾದ ಟಿ.ಸುನೀಲ್‍ಕುಮಾರ್ ಹಾಗೂ ಪೆÇಲೀಸ್ ಅಧಿಕಾರಿಗಳು ಗಸ್ತಿನಲ್ಲಿರುತ್ತಾರೆ. ಯಾರೇ ಕೆಟ್ಟದಾಗಿ ವರ್ತಿಸಿದರೂ ಶಿಕ್ಷೆ ಗ್ಯಾರಂಟಿ.

ಸಲಹೆಗಳು:
ಮದ್ಯ ಸೇವಿಸಿ ಪಾರ್ಟಿಯಲ್ಲಿ ಪಾಲ್ಗೊಳ್ಳಬೇಡಿ, ಕುಡಿದು ವಾಹನ ಚಲಾಯಿಸಬೇಡಿ, ಸಾಧ್ಯವಾದಷ್ಟು ಮನೆಯಲ್ಲೇ ಪಾರ್ಟಿ ಮಾಡಿಕೊಂಡರೆ ಉತ್ತಮ. ಮದ್ಯ ಸೇವಿಸಿ ಸ್ವೇಚ್ಛಾಚಾರದಿಂದ ವರ್ತಿಸಬೇಡಿ, ಶುಭಾಶಯ ವಿನಿಮಯ ಸಂದರ್ಭದಲ್ಲಿ ಯಾರೊಂದಿಗೂ ಅನುಚಿತವಾಗಿ ವರ್ತಿಸಬೇಡಿ. ಕುಡಿದ ನಶೆಯಲ್ಲಿ ಮಹಿಳೆಯರ ಮೇಲೆ ಬೀಳಬೇಡಿ. ವಾಹನ ಚಲಾಯಿಸುವಾಗ ಅತಿವೇಗ ಬೇಡ. ಯಾವುದೇ ಕಾರಣಕ್ಕೂ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಕಿರಿಕಿರಿ ಮಾಡಬೇಡಿ.

ಮನೆಗಳಲ್ಲೂ ಅತಿಯಾದ ಶಬ್ಧ ಉಂಟು ಮಾಡುವ ಸಂಗೀತ ಸಾಧನಗಳನ್ನು ಬಳಸಿ, ಕುಡಿದು ಪಾರ್ಟಿ ಮಾಡಿ ನೆರೆಹೊರೆಯವರಿಗೆ ತೊಂದರೆ ಕೊಡಬೇಡಿ. ಪಟಾಕಿ ಹಚ್ಚಿ ವೃದ್ಧರು ಮಕ್ಕಳಿಗೆ ತೊಂದರೆ ಕೊಡಬೇಡಿ…  ಒಂದು ವೇಳೆ ಹೀಗೆಲ್ಲಾ ಮಾಡಿ ತೊಂದರೆ ನೀಡಿದರೆ ಜಾಲೀಸರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎಚ್ಚರದಿಂದಿರಿ. ಹೊಸ ವರ್ಷವನ್ನು ಯಾರೊಬ್ಬರಿಗೂ ತೊಂದರೆಯಾಗದಂತೆ ಆಚರಿಸಿ ಸಂತೋಷದಿಂದಿರಿ.

Facebook Comments

Sri Raghav

Admin