ಹೊಸ ವಲಸೆ ನೀತಿ ಜಾರಿಗೆ ಜಗಮೊಂಡ ಟ್ರಂಪ್ ಸಜ್ಜು
ಸ್ಯಾನ್ಫ್ರಾನ್ಸಿಸ್ಕೋ, ಫೆ.17-ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಆದೇಶವನ್ನು ಜಾರಿಗೊಳಿಸಿ ಕೋರ್ಟ್ಗಳು ಮತ್ತು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಂಡು ಮುಖಭಂಗ ಅನುಭವಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಹೊಸ ನಮೂನೆಯ ನೀತಿಯನ್ನು ಜಾರಿಗೆ ತರಲು ಸಜ್ಜಾಗಿದ್ದಾರೆ. ನ್ಯಾಯಾಲಯಗಳು ಈ ಆದೇಶ ಅನುಷ್ಠಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ವಲಸೆ ನೀತಿಯನ್ನು ಅಮೆರಿಕ ಸರ್ಕಾರ ಹಿಂದಕ್ಕೆ ಪಡೆದಿತ್ತು. ಆದರೆ ಜಗಮೊಂಡ ಟ್ರಂಪ್ ಮುಂದಿನ ವಾರ ಹೊಸ ವಲಸೆ ಕಾರ್ಯಕಾರಿ ಆದೇಶವನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ನಮ್ಮ ನ್ಯಾಯಾಲಯ ಕೆಟ್ಟದ್ದಾಗಿದೆ ಮತ್ತು ಕೆಟ್ಟ ನಿರ್ಧಾರ ಕೈಗೊಂಡಿದೆ. ನಾವು ಅದಕ್ಕೆಲ್ಲ ಹಿಂಜರಿಯುವುದಿಲ್ಲ. ಈ ಮುಸ್ಲಿಂ ದೇಶಗಳನ್ನು ಅಮೆರಿಕದೊಳಗೆ ಪ್ರವೇಶಿಸಲು ನಿಷೇಧಿಸುವ ಹೊಸ ನಮೂನೆಯ ನೀತಿ ಜಾರಿಗೆ ಬರಲಿದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ಇದರೊಂದಿಗೆ ಅಮೆರಿಕ ಅಧ್ಯಕ್ಷರು ಮತ್ತೆ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS