ಹೊಸ ಸಚಿವರಿಗೆ ಹೊಸ ‘ಕಾರ್ ಭಾಗ್ಯ’ ಕರುಣಿಸಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cars

ಬೆಂಗಳೂರು, ಆ.10– ಮುಖ್ಯಮಂತ್ರಿ ಸಿದ್ದರಾಮಯ್ಯ  ಈಗ ಹೊಸ ಸಚಿವರಿಗೆ ಹೊಸ ಕಾರಿನ ಭಾಗ್ಯ ಕರುಣಿಸಿದ್ದಾರೆ.  ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ 12 ಸಚಿವರು, ಈ ಹಿಂದೆ ಸಚಿವರು ಬಳಸುತ್ತಿದ್ದ ಕಾರುಗಳನ್ನು ಬಳಸಲು ಒಪ್ಪಿಲ್ಲ. ಬದಲಾಗಿ ಹೊಸ ಕಾರುಗಳೇ ಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಿಎಂ ಓಕೆ ಎಂದಿದ್ದಾರೆ.  ನಮ್ಮ ಜನನಾಯಕರಿಗೆ ಒಂದು ರೂಡಿಯಾಗಿಬಿಟ್ಟಿದೆ. ಸರ್ಕಾರದಿಂದ ಏನೇನು ಸವಲತ್ತು ಸಿಗುತ್ತದೋ ಅದೆಲ್ಲಾ ಪಡೆದುಕೊಂಡು ಬಿಡಬೇಕಷ್ಟೇ. ಖರ್ಚೆಷ್ಟೇ ಆಗಿದ್ದರೂ ಅದು ಸರ್ಕಾರಕ್ಕೆ ಎನ್ನುವ ಮನಸ್ಥಿತಿ. ಈಗ ನಮ್ಮ ರಾಜ್ಯ ಸಚಿವ ಸಂಪುಟದ ಹೊಸ ಮುಖ್ಯಮಂತ್ರಿಗಳು ಸಹ ಹೊಸ ಕಾರೇ ಬೇಕು. ಮೊದಲಿನ ಸಚಿವರು ಬಳಸಿದ ಕಾರು ಬೇಡ ಅಂತ ಪಟ್ಟು ಹಿಡಿದು ಕೂತಿದಾರೆ.

ಈ ಬೇಡಿಕೆಗೆ ಓಕೆ ಅಂದ್ರೆ ಸರ್ಕಾರಕ್ಕೆ 3 ಕೋಟಿ ಖರ್ಚಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಕೊಡಲಿ ಏಟು ಬೀಳುತ್ತದೆ ಎಂದು ಗೊತ್ತಿದ್ದರೂ ಸಿಎಂ ಸಾಹೇಬರು ಸಚಿವರು ಇಟ್ಟಿದ್ದ ಹೊಸ ಕಾರಿನ ಬೇಡಿಕೆಯನ್ನು ಮರು ಮಾತಿಲ್ಲದೇ ಅಸ್ತು ಅಂದಿದ್ದಾರೆ.
ಹೊಸ ಸಚಿವರಿಗೆ ಹೊಸ ಕಾರು ಭಾಗ್ಯ
1) ಈಶ್ವರ ಖಂಡ್ರೆ – ಇನ್ನೋವಾ ಸಿಲ್ವರ್
2) ರಮೇಶ್‍ಕುಮಾರ್ -ಇನ್ನೋವಾ ಸಿಲ್ವರ್
3) ರುದ್ರಮ್ಮ ಮಾನಪ್ಪ ಲಮಾಣಿ – ಇನ್ನೋವಾ ಸಿಲ್ವರ್
4) ರಮೇಶ್ ಜಾರಕಿಹೊಳಿ – ಇನ್ನೋವಾ ಸಿಲ್ವರ್
5) ಡಾ.ಎಚ್.ಸಿ.ಮಹದೇವಪ್ಪ – ಇನ್ನೋವಾ ಸಿಲ್ವರ್
6) ಬಿ.ರಮಾನಾಥ ರೈ – ಇನ್ನೋವಾ ಸಿಲ್ವರ್
7) ಕಾಗೋಡು ತಿಮ್ಮಪ್ಪ – ಇನ್ನೋವಾ ಸೂಪರï ವೈಟ್
8) ತನ್ವೀರ್ ಸೇಠ್ – ಇನ್ನೋವಾ ಸೂಪರï ವೈಟ್
9) ಎಸï.ಎಸï.ಮಲ್ಲಿಕಾರ್ಜುನ್ – ಇನ್ನೋವಾ ಸೂಪರ್ ವೈಟ್
10) ಎಚï.ವೈ.ಮೇಟಿ -ಇನ್ನೋವಾ ಸೂಪರï ವೈಟ್
11) ಎಂ.ಆರï.ಸೀತಾರಾಂ – ಇನ್ನೋವಾ ಪರ್ಲï ವೈಟ್
12) ಬಸವರಾಜ ರಾಯರೆಡ್ಡಿ – ಇನ್ನೋವಾ ಪರ್ಲï ವೈಟ್
13) ಪ್ರಮೋದ್ ಮಧ್ವರಾಜ್ – ಇನ್ನೋವಾ ಪರ್ಲï ವೈಟ್
14) ವಿನಯï ಕುಲಕರ್ಣಿ -ಇನ್ನೋವಾ ಪರ್ಲ್ ವೈಟ್
15) ಪ್ರಿಯಾಂಕ ಖರ್ಗೆ – ಇನ್ನೋವಾ ಸಿಲ್ವರ್ ಮೆಟಾಲಿಕ್
ಒಂದೊಂದು ಕಾರಿನ ಬೆಲೆಯೂ 19 ಲಕ್ಷ 49 ಸಾವಿರ 353 ರೂಪಾಯಿ. ಒಟ್ಟು 15 ಕಾರುಗಳಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಕೆಎಸïಆರïಟಿಸಿ, ಬಿಎಂಟಿಸಿ ನೌಕರರಿಗೆ ವೇತನ ಪರಿಷ್ಕರಣೆಗೆ ಚೌಕಾಸಿ ಮಾಡಿ, ಕೊನೆಯಲ್ಲಿ ಶೇಕಡ 12ರಷ್ಟು ವೇತನ ಹೆಚ್ಚಳಕ್ಕೆ ತಲೆ ಅಲ್ಲಾಡಿಸಿದ್ದ ಸಿದ್ದರಾಮಯ್ಯ, 12 ಹೊಸ ಸಚಿವರಿಗೆ ಹೊಸ ಕಾರು ಖರೀದಿ ಮಾಡಲಿಕ್ಕೆ ಯಾವುದೇ ರೀತಿಯಲ್ಲೂ ಚೌಕಾಸಿ ಮಾಡಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin