ಹೊಸ ಸ್ವರೂಪದ ನಾಡಧ್ವಜಕ್ಕೆ ಅಭ್ಯಂತರವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Champa--02

ಬೆಂಗಳೂರು, ಮಾ.5- ಹೊಸ ಸ್ವರೂಪ ಪಡೆದಿರುವ ಪ್ರತ್ಯೇಕ ನಾಡ ಧ್ವಜಕ್ಕೆ ನಮ್ಮದೇನು ಅಭ್ಯಂತರ ಇಲ್ಲ ಎಂದು ಸಾಹಿತಿ ಡಾ.ಚಂಪಾ ಇಂದಿಲ್ಲಿ ಅಭಿಪ್ರಾಯಪಟ್ಟರು.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೆಂಪು, ಹಳದಿಯ ನಡುವೆ ಗಂಡುಬೇರುಂಡವುಳ್ಳ ಹೊಸ ಸ್ವರೂಪದ ನಾಡ ಧ್ವಜಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ ಎಂದು ಅವರು ಹೇಳಿದರು.  ಹಾಲಿ ಇರುವ ಕನ್ನಡ ಧ್ವಜ ಕನ್ನಡ ಪಕ್ಷದ ರಾಜಕೀಯ ಧ್ವಜವಾಗಿ ಇತ್ತು. ಹಾಗಾಗಿ ನಾಡಧ್ವಜವಾಗಿ ಅಂಗೀಕರಿಸಲು ತಾಂತ್ರಿಕ ಅಡಚಣೆಯಾಗಿತ್ತು. ಅದನ್ನು ಪರಿಶೀಲಿಸಿ ಗಂಡುಬೇರುಂಡವುಳ್ಳ ಹೊಸ ಧ್ವಜವನ್ನು ರೂಪಿಸಲಾಗಿದೆ ಎಂದು ಹೇಳಿದರು.

ನಾಡಿಗೆ ಪ್ರತ್ಯೇಕ ಧ್ವಜ ನೀಡಬೇಕೆಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಅದಕ್ಕೆ ಸಮಿತಿ ರಚನೆ ಮಾಡಿತು. ಆ ಸಮಿತಿ ನೀಡಿದ ವರದಿಯನ್ವಯ ರೂಪಿಸಿರುವ ನಾಡಧ್ವಜಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು.

ಕನ್ನಡಿಗರಿಗೆ ಆದ್ಯತೆ: ರಾಜ್ಯಸಭೆಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಸಂಸತ್‍ನಲ್ಲಿ ಕನ್ನಡಿಗರ ಧ್ವನಿ ಮೊಳಗಬೇಕು ಎಂದು ಚಂಪಾ ಒತ್ತಾಯಿಸಿದರು.

Facebook Comments

Sri Raghav

Admin