ಹೋಟೆಲ್ ಮತ್ತು ರೆಸ್ಟೋರೆಂಟ್’ಳಲ್ಲಿ ಗ್ರಾಹಕರು ಸರ್ವಿಸ್ ಟ್ಯಾಕ್ಸ್ ನೀಡಲು ನಿರಾಕರಿಸಬಹುದು..!

ಈ ಸುದ್ದಿಯನ್ನು ಶೇರ್ ಮಾಡಿ

Hotel-Bill

ನವದೆಹಲಿ. ಜ.02 : ಗ್ರಾಹಕರಿಗೆ ಹೋಟೆಲ್ ಮತ್ತು ರೆಸ್ಟೋರೆಂಟ್’ಳಲ್ಲಿ ಉತ್ತಮ ರೀತಿಯ ಸೇವೆ ಸಿಗದೆ ಹೋದಲ್ಲಿ ಸೇವಾಶುಲ್ಕ ನೀಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಹೊಟೇಲ್ ಅಥವಾ ರೆಸ್ಟೋರೆಂಟ್ ನಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ ಎಂದಿರುವ ಕೇಂದ್ರ ಸರ್ಕಾರ, ಅಲ್ಲಿನ ಸೇವೆಯಿಂದ ನಿಮಗೆ ತೃಪ್ತಿಯಾಗದಿದ್ದಲ್ಲಿ ಬಿಲ್ ನಲ್ಲಿ ಸೇವಾ ಶುಲ್ಕ ಸೇರಿಸದಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಬಹುದಾಗಿದೆ.

ಟಿಪ್ಸ್ ಬದಲಿಗೆ ಶೇಕಡಾ 5ರಿಂದ 20ರವರೆಗಿನ ಸೇವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಬಗ್ಗೆ ಹಲವು ಗ್ರಾಹಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದ್ದು, ಸೇವೆ ತೃಪ್ತಿಕರವಲ್ಲ ಎನಿಸಿದಲ್ಲಿ ಗ್ರಾಹಕರು ಅದನ್ನು ಪಾವತಿಸಬೇಕಾಗಿಲ್ಲ, ಅದನ್ನು ತೆರುವಂತೆ ಯಾರೂ ಒತ್ತಡ ಹೇರುವಂತಿಲ್ಲ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸಹಜವಾಗಿಯೇ ಬಿಲ್ ಗೆ ಸೇವಾ ಶುಲ್ಕ ಸೇರಿಸುವುದು ವಾಣಿಜ್ಯ ವ್ಯವಹಾರ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ ಈ ಬಗ್ಗೆ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸೂಚನೆ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಳಿಕೊಂಡಿದೆ.

ಗ್ರಾಹಕರ ರಕ್ಷಣಾ ಕಾಯ್ದೆ, 1986ರ ಪ್ರಕಾರ ವ್ಯಾಪಾರ ಅಥವಾ ಸೇವೆಯಲ್ಲಿ ಸರಿಯಾದ ಕ್ರಮ ಅನುಸರಿಸದಿದ್ದರೆ ನ್ಯಾಯ ಸಮ್ಮತವಲ್ಲದ ರೀತಿಯ ವಹಿವಾಟು ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin