ಹೋಟೆಲ್ ಮೇಲೆ ತಾಲಿಬಾನ್ ದಾಳಿ : ಒಬ್ಬ ಪೊಲೀಸ್, ಮೂವರು ಉಗ್ರರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

3ef285195d3e01d8a24186bed18760cd_Mಕಾಬೂಲ್,ಆ.1-ವಿದೇಶಿ ಗುತ್ತಿಗೆದಾರರು ತಂಗಿದ್ದ ಹೋಟೆಲ್‍ವೊಂದರ ಮೇಲೆ ತಾಲಿಬಾನ್ ಉಗ್ರರು ಇಂದು ಬೆಳಗಿನ ಜಾವ ಬಾಂಬ್ ದಾಳಿ ನಡೆಸಿದ್ದು , ಈ ದಾಳಿಯಲ್ಲಿ ಒಬ್ಬ ಪೊಲೀಸ್ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಮೂವರೂ ಉಗ್ರರನ್ನೂ ಯೋಧರು ಹೊಡೆದುರುಳಿಸಿದ್ದಾರೆ.   ಸತತ 7 ಗಂಟೆಗಳಿಂದ ನಡೆದ ದಾಳಿ-ಪ್ರತಿದಾಳಿಯಲ್ಲಿ ಒಬ್ಬ ಪೊಲೀಸ್ ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿರುವ ಹೊರತಾಗಿ ವಿದೇಶಿ ಗುತ್ತಿಗೆದಾರರಾಗಲಿ, ಹೋಟೆಲ್ ಸಿಬ್ಬಂದಿಯಾಗಲಿ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ. ಮೂವರು ಉಗ್ರರ ಹತ್ಯೆಯೊಂದಿಗೆ ದಾಳಿ ಮತ್ತು ಕಾರ್ಯಾಚರಣೆ ಮುಗಿದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಕಾಬೂಲ್ ಹೊರವಲಯದಲ್ಲಿರುವ ಹೋಟೆಲ್‍ನಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿಗರು ತಂಗಿದ್ದು , ಅವರನ್ನೇ ಗುರಿಯಾಗಿಸಿಕೊಂಡು ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಆದರೆ ದೊಡ್ಡ ಅನಾಹುತಗಳೇನೂ ಆಗಿಲ್ಲ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥ  ಅಬ್ದುಲ್ ರಹ್ಮಾನ್ ರಹೀಮಿ ತಿಳಿಸಿದ್ದಾರೆ.   ಕಳೆದ 15 ವರ್ಷಗಳಲ್ಲೇ ಘನಘೋರ ಎಂಬಂಥ ದಾಳಿ ಕಾಬೂಲ್‍ನಲ್ಲಿ ನಡೆದ ಒಂದೇ ವಾರದಲ್ಲಿ ಇಂದು ಈ ದಾಳಿ ನಡೆದಿದೆ.   ಪೊಲೀಸ್ ಅಧಿಕಾರಿ  ಹೇಳಿಕೆ ಹೊರತಾಗಿ ಇನ್ನೂ ಯಾವುದೇ ಸಾವು-ನೋವುಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.

Facebook Comments