ಹೋಳಿ ಬಣ್ಣಗಳ ಸಂಭ್ರಮದಲ್ಲಿ ಮಿಂದೆದ್ದ ಯುವ ಜನತೆ

ಈ ಸುದ್ದಿಯನ್ನು ಶೇರ್ ಮಾಡಿ

Hili-1
ಬೆಂಗಳೂರು, ಮಾ.12- ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಇಂದು ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು. ಯುವಜನರು, ಮಕ್ಕಳು ಪರಸ್ಪರ ಬಣ್ಣ ಎರಚಿ ಖುಷಿಪಟ್ಟು ಶುಭಾಶಯ ವಿನಿಮಯ ಮಾಡಿಕೊಂಡರು.  ರಾಜಾಜಿನಗರ ರಾಮಮಂದಿರ ಆಟದ ಮೈದಾನದಲ್ಲಿ ಯುವಕರು ಸುಡು ಬಿಸಿಲನ್ನೂ ಲೆಕ್ಕಿಸದೆ ಬಾಟಲಿಗಳಲ್ಲಿ ರಂಗು ರಂಗಿನ ನೀರನ್ನು ತುಂಬಿಸಿ ಮೈಮೇಲೆಲ್ಲ ಸುರಿದುಕೊಂಡು ಸಂಭ್ರಮಿಸಿದರು.  ಇನ್‍ಫೆಂಟ್ರಿ ರಸ್ತೆ, ಬಸವೇಶ್ವರನಗರ, ಜೆಪಿ ನಗರ, ಜಯನಗರ ಸೇರಿದಂತೆ ನಗರಾದ್ಯಂತ ಹೆಂಗೆಳೆಯರು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಮಕ್ಕಳು ಕೂಡ ನಾವೇನು ಕಡಿಮೆ ಇಲ್ಲ ಎಂಬಂತೆ ಬಣ್ಣವನ್ನು ಎರಚಿ ಸಂತಸಪಟ್ಟರು. ಇಂದು ಭಾನುವಾರ. ಜತೆಗೆ ಪಿಯುಸಿ ಮತ್ತು ಸಿಬಿಎಸ್‍ಇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿರುವುದರಿಂದ ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿಗಳ ರಂಗಿನ ಹೋಳಿ ಸಡಗರ ಸ್ವಲ್ಪ ಕಡಿಮೆಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Hili-2

Hili-5

Hili-4

Hili-3

Facebook Comments

Sri Raghav

Admin