ಹ್ಯಾಟ್ರಿಕ್ ಶಿವಣ್ಣ ಅಭಿನಯದ ಟಗರು ಚಿತ್ರದ ಅದ್ಧೂರಿ ಮುಹೂರ್ತ

ಈ ಸುದ್ದಿಯನ್ನು ಶೇರ್ ಮಾಡಿ

Tagaruಬೆಂಗಳೂರು, ಆ.21-ದುನಿಯಾ ಸೂರಿ ನಿರ್ದೇಶನದ ಸೆಂಚುರಿ ಸ್ಟಾರ್ ಡಾ.ಶಿವರಾಜ್ಕುಮಾರ್ ನಟಿಸುತ್ತಿರುವ ಟಗರು ಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಗವಿಪುರಂ ಬಳಿಯಿರುವ ಬಂಡೀ ಮಹಾಕಾಳಮ್ಮ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು.   ಮುಹೂರ್ತಕ್ಕೆ ನಟ ಯಶ್, ರವಿಚಂದ್ರನ್, ಯೋಗರಾಜ್ಭಟ್ ಮತ್ತಿತರರು ಗಣ್ಯರು ಆಗಮಿಸಿದ್ದರು. ರವಿಚಂದ್ರನ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರೆ, ಯಶ್ರವರು ಕ್ಯಾಮೆರ್ ಆನ್ ಮಾಡಿ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿದರು.  ಚಿತ್ರದ ನಾಯಕಿ ಮಂದಸ್ಮಿತೆ ಮಾನ್ವಿತಾ ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಅದ್ಧೂರಿ ಚಾಲನೆ ದೊರೆಯಿತು.

► Follow us on –  Facebook / Twitter  / Google+

Facebook Comments

Sri Raghav

Admin