ಹ್ಯಾವ್‍ಲಾಕ್ ಮತ್ತು ನೀಲ್ ದ್ವೀಪಗಳಿಂದ 1900ಕ್ಕೂ ಹೆಚ್ಚು ಸಂತ್ರಸ್ತ ಪ್ರವಾಸಿಗರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Andama

ನವದೆಹಲಿ/ ಪೋಟ್ ಬ್ಲೇರ್, ಡಿ.9– ಭಾರೀ ಬಿರುಗಾಳಿ ಮತ್ತು ಮಳೆಯಿಂದ ಅಂಡಮಾನ್ ಮತ್ತು ನಿಕೋಬಾರ್‍ನ ಹ್ಯಾವ್‍ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಅಪಾಯದಲ್ಲಿ ಸಿಲುಕಿದ್ದ ಒಟ್ಟು 1900ಕ್ಕೂ ಹೆಚ್ಚು ಪ್ರವಾಸಿಗರ ಸ್ಥಳಾಂತರ ಕಾರ್ಯಾಚರಣೆ ಮುಂದುವರಿದಿದೆ. ಬಿರುಗಾಳಿ ಮತ್ತು ಮಳೆ ಆರ್ಭಟ ಕಡಿಮೆಯಾಗಿರುವುದರಿಂದ ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ರಾಜಧಾನಿ ಪೋರ್ಟ್‍ಬ್ಲೇರ್‍ನಿಂದ ಸುಮಾರು 40 ಕಿ.ಮೀ.ದೂರದಲ್ಲಿರುವ ಹ್ಯಾವ್‍ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಪ್ರವಾಸಿಗರು ಬಿರುಗಾಳಿ ಮತ್ತು ಮಳೆ ಆರ್ಭಟದಿಂದ 1900ಕ್ಕೂ ಹೆಚ್ಚು ದೇಶ-ವಿದೇಶಗಳ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದರು.

ಅವರನ್ನು ಅಪಾಯದಿಂದ ಪಾರು ಮಾಡಲು ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಆರು ನೌಕೆಗಳು ಹಾಗೂ ವಾಯುಪಡೆಯ ಮೂರು ಹೆಲೆಕಾಪ್ಟರ್‍ಗಳು ಆ ದ್ವೀಪಗಳಿಗೆ ತೆರಳಿದ್ದು, ಸ್ಥಳಾಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ಪ್ರತಿಕೂಲ ಹವಾಮಾನದಿಂದ ನಿನ್ನೆ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin