ಸಂಗೊಳ್ಳಿ ರಾಯಣ್ಣನ ಡೈಲಾಗ್ ಹೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್..!

ಈ ಸುದ್ದಿಯನ್ನು ಶೇರ್ ಮಾಡಿ

Police--02

ಬೆಳಗಾವಿ, ನ.5-ವಿದ್ಯಾರ್ಥಿಗಳ ಎದುರು ಸಂಗೊಳ್ಳಿರಾಯಣ್ಣ ಚಿತ್ರದ ಡೈಲಾಗ್ ಹೇಳಿದ ಎಂಬ ಒಂದೇ ಕಾರಣಕ್ಕೆ ಪೊಲೀಸ್ ಕಾನ್‍ಸ್ಟೇಬಲ್ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. ಮಲ್ಲಮ್ಮನ ಬೆಳವಡಿ ಗ್ರಾಮದ ನಿವಾಸಿ ಜಾಕೀರ್ ಮುಲ್ಲಾ ಎಂಬುವರು ಪೊಲೀಸ್ ಕಾನ್ಸ್‍ಟೆಬಲ್‍ನಿಂದ ಹಲ್ಲೆಗೊಳಗಾದ ವ್ಯಕ್ತಿ. ಜಾಕೀರ್ ಮುಲ್ಲಾ ಬಸ್‍ನಿಲ್ದಾಣದ ಸಮೀಪ ನಟ ದರ್ಶನ್ ಅಭಿನಯದ ಸಂಗೊಳ್ಳಿರಾಯಣ್ಣ ಸಿನಿಮಾ ಡೈಲಾಗ್ ಹೇಳುತ್ತಾ ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಕಾನ್ಸ್‍ಟೆಬಲ್‍ವೊಬ್ಬರು ಏಕಾಏಕಿ ಹಾಡಹಗಲೇ ನಡುರಸ್ತೆಯಲ್ಲಿ ಸಾರ್ವಜನಿಕರ ಎದುರೇ ಜಾಕೀರ್ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ. ಹಲ್ಲೆಯಿಂದ ಅಸ್ವಸ್ಥರಾದ ಜಾಕೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Facebook Comments

Sri Raghav

Admin